ಕಸಾಪ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಹೆಬ್ಬಾಳೆ ನಾಮಪತ್ರ ಸಲ್ಲಿಕೆ

hebbale nampatra
Published on

ಬೀದರ್: ಮೇ 9ರಂದು ನಡೆಯಲಿರುವ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಸ್ಥಾನದ ಚುನಾವಣೆಗೆ ಪರಿಷತ್ ಗೌರವ ಕಾರ್ಯದರ್ಶಿ ಡಾ. ರಾಜಕುಮಾರ ಹೆಬ್ಬಾಳೆ ಸೋಮವಾರ ನಾಮಪತ್ರ ಸಲ್ಲಿಸಿದರು.

ನಗರದ ಕರ್ನಾಟಕ ಸಾಹಿತ್ಯ ಸಂಘದಲ್ಲಿ ಸೇರಿದ ಸಾಹಿತಿಗಳು, ಸಾಹಿತ್ಯಾಸಕ್ತರೊಂದಿಗೆ ಭವ್ಯ ಮೆರವಣಿಗೆ ನಡೆಯಿತು. ಪಾದಯಾತ್ರೆ ಮೂಲಕ ಅಂಬೇಡ್ಕರ್ ವೃತ್ತ, ಭಗತಸಿಂಗ್ ವೃತ್ತ ಮೂಲಕ ತಹಸೀಲ್ದಾರ್ ಕಚೇರಿಗೆ ಆಗಮಿಸಿದ ಹೆಬ್ಬಾಳೆ ಉಮೇದುವಾರಿಕೆ ಸಲ್ಲಿಸಿದರು. ಜಾನಪದ ಕಲಾವಿದರ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಭವ್ಯ ಮೆರವಣಿಗೆ ನಡೆಯಿತು.

ಈ ವೇಳೆ ಮಾತನಾಡಿದ ಹಿರಿಯ ಸಾಹಿತಿ ಪಂಚಾಕ್ಷರಿ ಪುಣ್ಯಶೆಟ್ಟಿ ಮಾತನಾಡಿ, ನಿರಂತರ ಕಲೆ ಮತ್ತು ಸಾಹಿತ್ಯ ಸೇವೆಯಲ್ಲಿ ತೊಡಗಿಸಿಕೊಂಡಿರುವ ರಾಜಕುಮಾರ ಹೆಬ್ಬಾಳೆ ಈ ಚುನಾವಣೆಯಲ್ಲಿ ಗೆಲುವು ಸಾಧಿಸಬೇಕು. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಅವರ ಬೆಂಬಲಕ್ಕೆ ನಿಂತು ಶ್ರಮಿಸಬೇಕು ಎಂದರು.

ಹಿರಿಯ ಸಾಹಿತಿ ಡಾ. ಎಂ.ಜಿ. ದೇಶಪಾಂಡೆ ಮಾತನಾಡಿ, ಜಿಲ್ಲೆಯ ಸಾಹಿತಿಗಳು ಹಾಗೂ ಕಲಾವಿದರನ್ನು ರಾಜ್ಯ, ರಾಷ್ಟ್ರಮಟ್ಟದಲ್ಲಿ ಪರಿಚಯಿಸುವ ಕಾರ್ಯ ಹೆಬ್ಬಾಳೆ ಮಾಡಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಪ್ರಾಣಭಯ ತೊರೆದು ಸುಮಾರು 4 ಸಾವಿರ ಗಂಟಲು ದ್ರವ ಪರೀಕ್ಷಿಸಿ ಸ್ವತಃ ಕರೊನಾ ವೈರಸ್ಗೆ ತುತ್ತಾಗಿ ಸಾವು ಗೆದ್ದು ಬಂದಿದ್ದಾರೆ. ಇಂಥ ಪರಿಶ್ರಮ ಜೀವಿಗೆ ಬೆಂಬಲಿಸುವ ಮೂಲಕ ಗೆಲ್ಲಿಸಿ ತರಬೇಕಿದೆ ಎಂದರು.

ಹಿರಿಯ ಸಾಹಿತಿಗಳಾದ ಡಾ.ಸೋಮನಾಥ ಯಾಳವಾರ, ಡಾ.ಗವಿಸಿದ್ದಪ್ಪ ಪಾಟೀಲ್ ಮಾತನಾಡಿದರು. ರಮೇಶ ಮಠಪತಿ, ವಸಂತ ಹುಣಸನಾಳೆ, ಜೈರಾಜ ಖಂಡ್ರೆ, ಸಿ.ಎಸ್.ಗಣಾಚಾರಿ, ಉಮಾಕಾಂತ ಮೀಸೆ, ರಾಮಕೃಷ್ಣನ್ ಸಾಳೆ, ಪ್ರಕಾಶ ಲಕ್ಕಶೆಟ್ಟಿ, ವೈಜಿನಾಥ ಕಮಠಾಣೆ, ಪ್ರೊ.ಅಶೋಕ ಮೈನಾಳೆ, ಸೂರ್ಯಕಾಂತ ವಲ್ಲೆಪುರೆ, ಶಂಭುಲಿಂಗ ಕಾಮಣ್ಣ, ಕಾಶಪ್ಪ ಬಾಲಕಿಲೆ, ಎಚ್.ಕಾಶಿನಾಥರೆಡ್ಡಿ, ಡಾ.ಬಸವರಾಜ ಸ್ವಾಮಿ, ಪ್ರೊ.ಎಸ್.ಬಿ.ಬಿರಾದಾರ, ಸಂಜೀವಕುಮಾರ ಜುಮ್ಮಾ, ಶರದ ನಾರಾಯಣಪೇಟಕರ್, ಶಿವಾನಂದ ಗುಂದಗಿ, ಶರಣಪ್ಪ ಚಿಟ್ಮೆ, ಚಂದ್ರಶೇಖರ ಹೆಬ್ಬಾಳೆ, ಡಾ.ಜಗನ್ನಾಥ ಹೆಬ್ಬಾಳೆ, ಡಾ.ಮಹಾನಂದ ಮಡಕಿ, ಶ್ರೀಕಾಂತ ಪಾಟೀಲ್, ಡಾ.ಸುನೀತಾ ಕೂಡ್ಲಿಕರ್ ಇತರರಿದ್ದರು.

ಕರ್ನಾಟಕ ಸಾಹಿತ್ಯ ಸಂಘ ಹಾಗೂ ತರಬೇತಿ ಕೇಂದ್ರಕ್ಕೆ ಕೇಂದ್ರ ಸರ್ಕಾರದಿಂದ ಲಕ್ಷಾಂತರ ರೂಪಾಯಿ ಅನುದಾನ ತಂದು ಮಾದರಿ ಸಭಾ ಭವನವನ್ನು ರಾಜಕುಮಾರ ಹೆಬ್ಬಾಳೆ ನಿರ್ಮಿಸಿದ್ದಾರೆ. ಕ್ರಿಯಾಶೀಲ ವ್ಯಕ್ತಿತ್ವದ ಹೆಬ್ಬಾಳೆಗೆ ಕಸಾಪ ಅಜೀವ ಸದಸ್ಯರು ಖಂಡಿತವೂ ಕೈಹಿಡಿಯಲಿದ್ದು, ಗೆಲುವು ಪಕ್ಕಾ.| ಪಂಚಾಕ್ಷರಿ ಪುಣ್ಯಶೆಟ್ಟಿ, ಹಿರಿಯ ಸಾಹಿತಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net