ಕಸಾಪ ಕಾರ್ಯ ಶ್ಲಾಘನೀಯ

6Rayabag2
Published on

ರಾಯಬಾಗ: ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಿ, ಕನ್ನಡ ಕಂಪು ಪಸರಿಸುವುದರೊಂದಿಗೆ ಹಲವಾರು ಕನ್ನಡ ಪುಸ್ತಕಗಳನ್ನು ಮುದ್ರಣಗೊಳಿಸಿ, ಕನ್ನಡ ಸೇವೆ ಸಲ್ಲಿಸುತ್ತಿರುವ ಕನ್ನಡ ಸಾಹಿತ್ಯ ಪರಿಷತ್ ಕಾರ್ಯ ಶ್ಲಾಘನೀಯ ಎಂದು ಕಸಾಪ ತಾಲೂಕು ಗೌರವ ಕಾರ್ಯದರ್ಶಿ ಎಸ್.ಬಿ.ಕ್ಯಾಸ್ತಿ ಹೇಳಿದರು.

ತಾಲೂಕಿನ ಹಿಡಕಲ್ ಗ್ರಾಮದ ಕವಿರತ್ನ ಕಾಳಿದಾಸ ಕನ್ನಡ ಮಾಧ್ಯಮ ಪ್ರಾಥಮಿಕ ಶಾಲೆ ಸಭಾಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕದಿಂದ ಈಚೆಗೆ ಹಮ್ಮಿಕೊಂಡಿದ್ದ ಕನ್ನಡ ಸಾಹಿತ್ಯ ಪರಿಷತ್ ೧೧೧ನೇ ಸಂಸ್ಥಾಪನಾ ದಿನಾಚರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಚುಟುಕು ಸಾಹಿತಿ ಡಿ.ಎಂ.ಕೋಳಿ ಪ್ರಾಸ್ತಾವಿಕ ಮಾತನಾಡಿದರು. ಮುಖ್ಯ ಶಿಕ್ಷಕ ಬೀರಪ್ಪ ತಡಸಲೂರ, ಶಿಕ್ಷಕ ಬಿ.ಎಲ್.ಘಂಟಿ ಸಿ.ಎಸ್.ಮಾಂಗ, ಅನಿತಾ ಕುರಬೇಟ, ಸತ್ಯಶ್ರೀ ಬೆಳಗಲಿ, ಎಂ.ಐ.ಪಾಟೀಲ, ಎಸ್.ಪಿ.ಬಡಿಗೇರ, ಎಂ.ಎಸ್.ಕರಿಗಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net