

ಶಹಾಪುರ: ಇಲ್ಲಿನ ಕನ್ನಡ ಸಾಹಿತ್ಯ ಪರಿಷತ್‌ನ ಸುತ್ತುಗೋಡೆ ನಿರ್ಮಾಣಕ್ಕೆ ೧೦ ಲಕ್ಷ ರೂ. ನೀಡುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಹೇಳಿದರು.
ನಗರದ ಕನ್ನಡ ಭವನದಲ್ಲಿ ತಾಲೂಕ ಕನ್ನಡ ಸಾಹಿತ್ಯ ಪರಿಷತ್‌ನಿಂದ ಮಂಗಳವಾರ ಹಮ್ಮಿಕೊಂಡ ಅಭಿನಂದನಾ ಸಮಾರಂಭ ಹಾಗೂ ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನಾಡು, ನುಡಿ, ಸಾಹಿತ್ಯ, ಸಂಸ್ಕೃತಿ, ಉಳಿಸಿ ಬೆಳೆಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದರು.
ಶಹಾಪುರ ನಗರ ಮಾದರಿಯನ್ನಾಗಿಸಲು ಪ್ರಜಾಸೌಧ ನಿರ್ಮಾಣ, ಕ್ರೀಡಾ ಅಭಿವೃದ್ಧಿ ಹಾಗೂ ತಾಲೂಕಿನ ಹಳ್ಳಿಗಳಿಗೆ ರಸ್ತೆ, ಸಾರಿಗೆ, ಶೈಕ್ಷಣಿಕ ಅಭಿವೃದ್ಧಿ ಪ್ರತಿಯೊಂದು ಕ್ಷೇತ್ರಗಳ ಅಭಿವೃದ್ಧಿಪಡಿಸಲಾಗುತ್ತದೆ. ಜನರ ನಿರೀಕ್ಷೆಗೆ ತಕ್ಕಂತೆ ಅಭಿವೃದ್ಧಿಪಡಿಸುವೆ. ಐದು ಬಾರಿ ಗೆಲ್ಲಿಸಿದ ಮತದಾರರ ಆಶೋತ್ತರಗಳಿಗೆ ಸದಾ ಸ್ಪಂಧಿಸುವುದಾಗಿ ಹೇಳಿದರು.
ನಿಕಟಪೂರ್ವ ಕಸಾಪ ಅಧ್ಯಕ್ಷ ಸಿದ್ಧಲಿಂಗಣ್ಣ ಆನೆಗುಂದಿ ಪ್ರಾಸ್ತಾವಿಕವಾಗಿ ಮಾತನಾಡಿದರು. ತಾಲೂಕು ಅಧ್ಯಕ್ಷ ಡಾ.ರವೀಂದ್ರನಾಥ ಹೊಸಮನಿ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ಸಿದ್ಧರಾಮ ಹೊನ್ಕಲ್, ಶರಣು ಬಿ.ಗದ್ದುಗೆ, ವಿವಿಧ ವಲಯ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಡಾ.ದೇವಿಂದ್ರಪ್ಪ ಹಡಪದ, ಮಲ್ಲಣ್ಣಗೌಡ ಪೊಲೀಸ್ ಪಾಟೀಲ್, ಮಲ್ಲಣ್ಣ ಹೊಸ್ಮನಿ, ಮಹೇಶ ಪತ್ತಾರ, ಡಾ.ನಾಗರಾಜ ದೊರೆ, ಶರಣಬಸವ ಪೊಲೀಸ್ ಬಿರಾದಾರ, ಹುಸನಪ್ಪ ಕಟ್ಟಿಮನಿ, ಬಸವರಾಜ ಹಿರೇಮಠ, ಸಾಯಬಣ್ಣ ಪುರ್ಲೆ, ಶಂಕರ ಹುಲ್ಕಲ್, ಕಾವೇರಿ ಪಾಟೀಲ್, ಸುರೇಶ ಅರುಣಿ, ನಿಂಗಣ್ಣ ತಿಪ್ಪನಹಳ್ಳಿ ಇತರರಿದ್ದರು.
ಇದೇ ವೇಳೆ ಡಾ.ಶಿವರಂಜನ್ ಸತ್ಯಂಪೇಟ್, ಡಾ.ಮಲ್ಲಿಕಾರ್ಜುನ ಮಾನ್ಪಡೆ, ಡಾ.ಬಸವರಾಜ ಕಲೆಗಾರ, ಸಣ್ಣ ನಿಂಗಪ್ಪ ನಾಯ್ಕೋಡಿ, ಪ್ರಕಾಶ ದೊರೆ, ಈರಣ್ಣ ಹಾದಿಮನಿ, ಈರಣ್ಣ ಮೌರ್ಯ, ಮಿನಾಕ್ಷಿ ಹೊಸ್ಮನಿ, ಪರಸಪ್ಪ ಅಜಗಪ್ಪನವರ್, ಸಂಗೀತಾ ದೇಸಾಯಿ, ಶಕುಂತಲಾ ಹಡಗಲಿ, ಅಶೋಕ ಚೌಧರಿ, ಅಮೃತ ಸಾಹು, ಉದಯ ಸೇರಿ ಹಲವರಿಗೆ ಸನ್ಮಾನಿಸಲಾಯಿತು.