ಕಸಬಾ ಬಡಾವಣೆಯಲ್ಲಿ ಮತ್ತೆ ಭೂಕುಸಿತ

25 NRD-3A
Published on

ನರಗುಂದ: ಪಟ್ಟಣದ ಕಸಬಾ ಬಡಾವಣೆಯಲ್ಲಿ ಶನಿವಾರ ಮತ್ತೆ ಭೂ ಕುಸಿತ ಸಂಭವಿಸಿದ್ದು, ಜನರಲ್ಲಿ ಮತ್ತಷ್ಟು ಆತಂಕ ಹೆಚ್ಚಿಸಿದೆ.

ಕಸಬಾ ಸಾಲಿ ಬಸವೇಶ್ವರ ದೇವಸ್ಥಾನದ ಹತ್ತಿರದ ಅಕ್ಬರಸಾಬ್ ಯಲಿಗಾರ ಎಂಬುವರ ಮನೆ ಪಕ್ಕದ ಖಾಲಿ ನಿವೇಶನದಲ್ಲಿ ಭೂಮಿ ಕುಸಿದಿದೆ. ಇದರಿಂದಾಗಿ ಮನೆಯ ಗೋಡೆಯೂ ಕುಸಿದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಗುಂಡಿ ಬಿದ್ದಿರುವ ಇಲ್ಲಿನ ಪ್ರದೇಶದಲ್ಲಿ ಬಡಾವಣೆಯ ಅನೇಕ ಮಕ್ಕಳು ನಿತ್ಯ ಆಟವಾಡುತ್ತಿದ್ದರು. ಶನಿವಾರ ನಸುಕಿನ ಜಾವ 5 ಗಂಟೆ ಸುಮಾರಿಗೆ ಭೂಕುಸಿತವಾಗಿದೆ. ಸ್ಥಳಕ್ಕೆ ಪುರಸಭೆ ಮುಖ್ಯಾಧಿಕಾರಿ ಸಂಗಮೇಶ ಬ್ಯಾಳಿ ಭೇಟಿ ನೀಡಿ ಗುಂಡಿ ಮುಚ್ಚಿಸುವ ಭರವಸೆ ನೀಡಿದರು.

EndFragment

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net