ಕಸಬಾ ಪ್ರಾಥಮಿಕ ಕೃಷಿ ಪತ್ತಿಗೆ ನಿರ್ದೇಶಕರ ಆಯ್ಕೆ

Published on

ಕೊಳ್ಳೇಗಾಲ: ಪಟ್ಟಣದ ಸರ್ಕಾರಿ ನ್ಯಾಷನಲ್ ಶಾಲಾ ಆವರಣದಲ್ಲಿ ಕಸಬಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಯ ನಿರ್ದೇಶಕರ ಆಯ್ಕೆಗೆ ಚುನಾವಣೆ ನಡೆಯಿತು.

ಸಾಮಾನ್ಯ ಕ್ಷೇತ್ರದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಮಹದೇವಸ್ವಾಮಿ ಪಿ.ಸುರೇಶ್ 583, ಎಂ.ಶೇಖರ್ 469, ಎಸ್.ರವಿಕುಮಾರ್ 458, ಎಂ.ಪಿ.ಇಂದ್ರ 453, ಎಂ.ಕೆ.ಪುಟ್ಟಸ್ವಾಮಿ 399, ಪ್ರವರ್ಗ-ಎ ಮೀಸಲು ಕ್ಷೇತ್ರದಿಂದ ಎಸ್.ರಮೇಶ್ 46 ಹಾಗೂ ಪ್ರವರ್ಗ-ಬಿ ಮೀಸಲು ಕ್ಷೇತ್ರದಿಂದ ಸಿ.ಬಸವರಾಜು 534, ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಿಂದ ಬಿ. ಮಂಜುನಾಥ್ 422 ಹಾಗೂ ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರದಿಂದ ಲೋಕೇಶ್ 395 ಮತ ಪಡೆದು ಜಯಶೀಲರಾಗಿದ್ದಾರೆ. ನೂತನವಾಗಿ ಆಯ್ಕೆಯಾದ ನಿರ್ದೇಶಕರಿಗೆ ಚುನಾವಣಾಧಿಕಾರಿ ನಾಗೇಶ್ ಪ್ರಮಾಣ ಪತ್ರ ನೀಡಿ ವಿತರಿಸಿದರು. ಕಸಬಾ ಸೊಸೈಟಿ ಮುಖ್ಯ ಕಾರ್ಯ ನಿರ್ವಾಹಕಾಧಿಕಾರಿ ಬಿ.ನಾಗರಾಜು ಹಾಗೂ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net