

ಹಾಸನ: ರಾಷ್ಟೀಯ ಹಸಿರು ನ್ಯಾಮ ಮಂಡಳಿ ಪ್ರಾಧಿಕಾರದ ಮಾನದಂಡದಂತೆ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಪ್ರತಿ ವಾರ್ಡಗಳಲ್ಲಿರುವ ಎಲ್ಲಾ ಮನೆಗಳಿಂದ ಕಸ ವಿಗಂಡಿಸಿ ಸಂಗ್ರಹಿಸಿ ವೈಜ್ಞಾನಿಕವಾಗಿ ವಿಲೇವಾರಿ ಮಾಡುವಂತೆ ಎಂದು ಜಿಲ್ಲಾಧಿಕಾರಿ ಅರ್ಚನಾ ಎಂ ಎಸ್ ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಘನ ತ್ಯಾಜ್ಯ ವಸ್ತುಗಳ ವೈಜ್ಞಾನಿಕ ವಿಲೇವಾರಿ ಕುರಿತು ಸಭೆ ನಡೆಸಿ ಮಾತನಾಡಿದ ಅವರು, ನಗರ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಕಸ ಎಸೆಯಲಾಗುತ್ತಿರುವ ಕಪ್ಪು ಪ್ರದೇಶಗಳನ್ನು ಗುರುತಿಸಿ ನಿಯಂತ್ರಿಸಿ ಹಾಗೂ ಕಸ ಎಸೆಯುವವರ ವಿರುದ್ದ ಕ್ರಮ ಕೈಗೊಳ್ಳಿ. ಇನ್ನೊಂದು ವಾರದೊಳಗೆ ಶೇ 100 ರಷ್ಟು, ವಿಂಗಡಿಸಿ ಕಸ ಸಂಗ್ರಹಣೆ ಮಾಡಬೇಕು ಎಂದು ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು
ಕಸ ವಿಲೇವಾರಿ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಿ ಎಂದರು.ಸ್ವಚ್ಛ ಭಾರತ್ ಮಿಷನ್ ಪ್ರಾರಂಭವಾಗಿ ಹಲವು ವರ್ಷಗಳು ಕಳೆದಿವೆ,ಇನ್ನೂ ಜಾಗೃತಿ ಕಾರ್ಯವೇ ನಡೆಯುತ್ತಿದೆ .ದಂಡ ವಿಧಿಸಲು ಪ್ರಾರಂಭ ಮಾಡಿದರೆ ಮಾತ್ರ ಜನರು ಅನುಸರಿಸಲು ಪ್ರಾರಂಭಿಸುತ್ತಾರೆ ಎಂದರು.
ರಾಷ್ಟೀಯ ಹಸಿರು ನ್ಯಾಯ ಮಂಡಳಿ ಸಂಬಂಧಿಸಿದಂತೆ ರಾಜ್ಯದ 17 ನದಿಗಳಲ್ಲಿ ಮಲೀನ ನೀರಿನಿಂದ ಆಗುತ್ತಿರುವ ನೀರಿನ ಮಾಲೀನ್ಯ ತಡೆಗಟ್ಟಲು ನದಿ ಪಾತ್ರದಡಿ ಇರುವ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಒಳಚರಂಡಿ ಕಾಮಗಾರಿ ಮತ್ತು ಮಲೀನ ನೀರು ಸಂಸ್ಕಣಾ ಘಟಕದ ನಿರ್ಮಾಣಕ್ಕೆ ಸಂಬಂದಿಸಿದಂತೆ ಅವಶ್ಯಕತೆ ಇರುವ ಭೂಮಿಯನು ಮಂಡಳಿಗೆ ಹಸ್ತಾಂತರಿಸುವ ಪ್ರಕರಣಗಳಿಗೆ ಮತ್ತು ಕರ್ನಾಟಕ ನಗರ ನೀರು ಸರಬರಾಜು ಮಂಡಖಿಗೆ ಪಾವತಿಸಬೇಕಾಗಿರುವ ಬಾಕಿ ವಂತಿಕೆಗಳ ಪಾವತಿಗೆ ಕ್ರಮ ವಹಿಸಲು ಸೂಚಿಸಿದರು.
ನಗರ ಸ್ಥಳೀಯ ಸಂಸ್ಥೆಗಳಲ್ಲಿ ಒಳಚರಂಡಿ ಕಾಮಗಾರಿ ಮತ್ತು ಮಲೀನ ನೀರು ಸಂಸ್ಕರಣಾ ಘಟಕದ ನಿರ್ಮಾಣಕ್ಕೆ ಹಾಗೂ ಕುಡಿಯುವ ನೀರು ಸರಬರಾಜು ಕಾಮಗಾರಿಗಳಿಗೆ ಸಂಬಂಧಿಸಿದಂತೆ ಅವಶ್ಯಕತೆ ಇರುವ ಭೂಮಿಯನ್ನು ಮಂಡಳಿಗೆ ಹಸ್ತಾಂತರಿಸುವ ಪ್ರಕರಣಗಳಿಗೆ ಹಾಗೂ ಮಂಡಳಿಗೆ ಪಾವರತಿಸಲು ಬಾಕಿ ಇರುವ ವಂತಿಕೆಗಳನ್ನು ಸಂಗ್ರಹಿಸುವಂತೆ ಜಿಲ್ಲಾಧಿಕಾರಿ ಸೂಚನೆ ನೀಡಿದರು.
ನೀರು ಸರಬರಾಜು ಬಗ್ಗೆ ಎಚ್ಚರಿಕೆ ಇರಲಿ. ಕುಡಿಯುವ ನೀರಿನ ಸರಬರಾಜು ಪೈಪ್ ಗಳ ಸುಸ್ಥಿತಿ ಗಮನಿಸಿ. ಕಲುಷಿತ ನೀರು, ಕುಡಿಯುವ ನೀರಿನ ಜೊತೆ ಸೇರ್ಪಡೆಯಾಗದೇ ಇರುವುದನ್ನು ಖಾತರಿ ಪಡಿಸಿಕೊಳ್ಳಿ, ಮಳೆಗಾಲ ಪ್ರಾರಂಭಕ್ಕೆ ಮುನ್ನ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ಸಂಪೂರ್ಣ ಪೈಪ್ ಲೈನ್ ಹಾಗೂ ಜಲ ಮೂಲಗಳನ್ನು ಪರಿಶೀಲಿಸಿ, ಕಲುಷಿತ, ಮಲಿನ ನೀರು ಕುಡಿಯುವ ನೀರಿಗೆ ಸೇರತ್ತಿದೆಯೆ ಪರಿಶೀಲಿಸಿ ಅಗತ್ಯ ಕ್ರಮವಹಿಸಿ ಎಂದು ಅಧಿಕಾರಿಗಳಿಗೆ ಡಿಸಿ ಸೂಚಿದರು.
ಹಾಸನ ನಗರಸಭೆ ವ್ಯಾಪ್ತಿಗೆ ಹೆಚ್ಚುವರಿಯಾಗಿ 25 ಗ್ರಾಮಗಳು ಸೇರ್ಪಡೆ ಆಗಿರುವುದರಿಂದ ಶೌಚಗುಂಡಿಗಳನ್ನು ಸ್ವಚ್ಚಗೊಳಿಸಲು ಹೀರು ಯಂತ್ರ ಕೊರತೆ ಇರುವ ಕಾರಣ ಹೆಚ್ಚುವರಿ ವಾಹನ ಖರೀದಿಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ತಿಳಿಸಿದರು.
ಸಭೆಯಲ್ಲಿ ಉಪ ವಿಭಾಗಾಧಿಕಾರಿ ಮೊಹಮದ್ ನಸಿಮ್, ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕ ಜಗದೀಶ್,ವಿವಿಧ ಇಲಾಖೆಯ ಅಧಿಕಾರಿಗಳು, ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಆಯುಕ್ತರು, ಮುಖ್ಯಾಧಿಕಾರಿ ಮತ್ತಿತತರು ಹಾಜರಿದ್ದರು.