

ಬಸವಕಲ್ಯಾಣ: ವಿದ್ಯಾರ್ಥಿಗಳು ಕಷ್ಟಪಟ್ಟು ಓದದೇ ಇಷ್ಟಪಟ್ಟು ಓದಬೇಕು. ಮನಸಾಪೂರ್ವವಾಗಿ ಅಧ್ಯಯನ ಮಾಡಿದರೆ ಯಶಸ್ಸಿನ ದಾರಿ ತೆರೆದುಕೊಳ್ಳುತ್ತದೆ ಎಂದು ಪ್ರೊ.ಚಿತ್ರಶೇಖರ ಚಿರಳ್ಳಿ ಹೇಳಿದರು.
ನಗರದ ಎಸ್‌ಎಸ್‌ಕೆ ಬಸವೇಶ್ವರ ಕಲಾ ವಿಜ್ಞಾನ, ವಾಣಿಜ್ಯ ಸ್ನಾತಕ ಮತ್ತು ಸ್ನಾತಕೋತ್ತರ ಮಹಾವಿದ್ಯಾಲಯದಲ್ಲಿ ಭಾನುವಾರ ಆಯೋಜಿಸಿದ್ದ ಬಿಎ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದ ಅವರು, ಪದವಿ ನಂತರ ಉನ್ನತ ಶಿಕ್ಷಣ ಶಿಕ್ಷಣಕ್ಕೆ ಒತ್ತು ನೀಡುವ ಜತೆಗೆ ಸ್ಪರ್ದಾತ್ಮ ಪರೀಕ್ಷೆಗಳನ್ನು ಅಗತ್ಯ ಸಿದ್ಧತೆಯೊಂದಿಗೆ ಬರೆಯಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ. ಶಿವಕುಮಾರ ಪಾಟೀಲ್ ಮಾತನಾಡಿ, ನಿರಂತರ ಓದು ಯಶಸ್ಸಿನ ದಾರಿಯನ್ನು ಸುಗಮಮಗೊಳಿಸುತ್ತದೆ. ಬರುವ ಅವಕಾಶಗಳನ್ನು ಸದುಪಯೋಗ ಪಡೆಸಿಕೊಳ್ಳಬೇಕು. ವಿದ್ಯಾರ್ಥಿಗಳು ಜೀವನಲ್ಲಿ ಡಿಸಿಪ್ಲಿನ್, ಡೇಡಿಕೇಷನ್, ಡ್ಯೂಟಿ ಈ ಮೂರನ್ನು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಕಲಾ ವಿಭಾಗದ ಡಾ.ಎಂ.ಜಿ.ಪಾಟೀಲ್ ಮಾತನಾಡಿದರು. ವಿದ್ಯಾರ್ಥಿಗಳು ಅನಿಸಿಕೆ ಹಂಚಿಕೊಂಡರು. ಐಕ್ಯೂಎಸಿ ಸಂಯೋಜಕರಾದ ಡಾ.ರಮೇಶ ಕೆಬಿ, ಪ್ರೊ.ವಿಠೋಬಾ ದೊಣ್ಣೇಗೌಡರ್, ಗ್ರಂಥಪಾಲಕ ಸೂರ್ಯಕಾಂತ ನಾಸೆ, ಲಕ್ಷ್ಮೀಬಾಯಿ ಭಂಕೂರ, ಕಲ್ಯಾಣಪ್ಪ ನಾವದಗಿ, ಮಹಾದೇವ ಡಿ, ಸತೀಶ ರಾಠೋಡ, ಶಿವಾನಂದ ಬಿ, ಭೀಮಾಶಂಕರ ಪೂಜಾರಿ, ಭಾರತಿ ಮಠ, ಚಿನ್ನಮ್ಮ, ವೈಶಾಲಿ, ಶಿಲ್ಪಾ ಇತರರಿದ್ದರು.
ವೈಷ್ಣವಿ ಸ್ವಾಗತಿಸಿದರು. ಅನುಜಾ ವಂದಿಸಿದರು, ಕೀರ್ತಿ ನಿರೂಪಣೆ ಮಾಡಿದರು.ರಾಜಶ್ರೀ ಪ್ರಾರ್ಥನಾ ಗೀತೆ ಹಾಡಿದರು. ವಿವಿಧ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.