ಕಷ್ಟದಲ್ಲಿರುವ ಜನರಿಗೆ ಸಹಾಯಹಸ್ತ ಚಾಚಿ - ಮಂಗಲ ಅಂಗಡಿ

25
Published on

ಬೆಳಗಾವಿ: ಲಾಕ್‌ಡೌನ್‌ನಿಂದ ಉದ್ಯೋಗ, ಆದಾಯ ಇಲ್ಲದೆ ಸಾಕಷ್ಟು ಜನ ಸಮಸ್ಯೆಗಳು ಎದುರಿಸುತ್ತಿ ದ್ದಾರೆ. ಕಷ್ಟದಲ್ಲಿರುವವರಿಗೆ ಪ್ರತಿಯೊಬ್ಬರೂ ಸಹಾಯ ಮಾಡಲು ಮುಂದಾಗಬೇಕು ಎಂದು ಸಂಸದೆ ಮಂಗಲ ಅಂಗಡಿ ಹೇಳಿದ್ದಾರೆ.

ನಗರದಲ್ಲಿ ಲಿಂಗಾಯತ ಮಹಿಳಾ ಸಮಾಜದ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ಬಡವರಿಗೆ ದಿನಸಿ ಸಾಮಗ್ರಿಗಳ ಕಿಟ್ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕರೊನಾದಿಂದ ಸಂಕಷ್ಟಕ್ಕೆ ಒಳಗಾಗಿರುವ ಬಡವರಿಗೆ ಲಿಂಗಾಯತ ಮಹಿಳಾ ಸಮಾಜ ಒಳ್ಳೆಯ ಕೆಲಸ ಮಾಡುತ್ತಿದೆ.

ಸಮಾಜದಿಂದ ಕರೊನಾ ಮುಕ್ತವಾಗಲು ನಾವೆಲ್ಲ ಒಗ್ಗಟ್ಟಿನಿಂದ ಶ್ರಮಿಸಬೇಕು ಎಂದು ಹೇಳಿದರು. ಲಿಂಗಾಯತ ಮಹಿಳಾ ಸಮಾಜದ ಗೌರವ ಅಧ್ಯಕ್ಷ ಶೈಲಜಾ ಬಿಂಗೆ, ಅಧ್ಯಕ್ಷೆ ಶಾಂತಾ ಮಸೂತಿ, ಜ್ಯೋತಿ ಬದಾಮಿ, ಸಂಗೀತಾ ಅಕ್ಕಿ, ಹೀರಾ ಚೌಗುಲೆ, ವಿನಿತಾ ಹಂಚಿನಮನಿ, ಶಾಂತಾ ಪಾಟೀಲ, ಕೆ.ಐ.ಗಾಣಿಗೇರ, ರಮೇಶ ಪಾಟೀಲ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net