ಕಷ್ಟದ ರಸ್ತೆ ಸಂಚಾರಕ್ಕೆ ಕೊನೆಗೂ ಸಿಕ್ತು ಮುಕ್ತಿ

25MKH1
ಇಟಗಿಕ್ರಾಸ್-ಹುಣಶೀಕಟ್ಟಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಮಹಾಂತೇಶ ದೊಡಗೌಡರ ಭೂಮಿಪೂಜೆ ನೆರವೇರಿಸಿದರು. ಚನ್ನಬಸಪ್ಪ ಮೊಕಾಶಿ, ರುದ್ರಪ್ಪ ಹೈಬತ್ತಿ, ಉಳವಪ್ಪ ಉಳ್ಳಾಗಡ್ಡಿ, ವಿಠ್ಠಲ ಹೈಬತ್ತಿ ಇತರರಿದ್ದರು.
Published on

ಎಂ.ಕೆ.ಹುಬ್ಬಳ್ಳಿ: ಕಳೆದ ಐದಾರು ವರ್ಷಗಳಿಂದ ಹಾಳಾಗಿ ತಗ್ಗು-ಗುಂಡಿಗಳ ಮಧ್ಯೆ ಕಣ್ಮರೆಯಾಗುತ್ತಿದ್ದ ಇಟಗಿಕ್ರಾಸ್-ಹುಣಶೀಕಟ್ಟಿ ರಸ್ತೆಗೆ ಕೊನೆಗೂ ಅಭಿವೃದ್ಧಿ ಭಾಗ್ಯ ಕೂಡಿಬಂದಿದೆ.

ಪಿಡಬ್ಲುೃಡಿ ಇಲಾಖೆಯಡಿ ಸುಮಾರು 4 ಕೋಟಿ ರೂ. ವೆಚ್ಚದಲ್ಲಿ ಗುಣಮಟ್ಟದ ರಸ್ತೆ ಕಾಮಗಾರಿಗೆ ಕ್ರಮ ಕೈಗೊಳ್ಳಲಾಗಿದ್ದು, ಶಾಸಕ ಮಹಾಂತೇಶ ದೊಡಗೌಡರ ಸೋಮವಾರ ಭೂಮಿಪೂಜೆ ನೆರವೇರಿಸುವ ಮೂಲಕ ಅಭಿವೃದ್ಧಿ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ.

ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಈಗಾಗಲೇ ಶಕ್ತಿಮೀರಿ ಪ್ರಯತ್ನಿಸುತ್ತಿದ್ದೇನೆ. ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುತ್ತಿದ್ದೇನೆ. ಅಭಿವೃದ್ಧಿಯೇ ನನ್ನ ಮೂಲ ಗುರಿ ಎಂದು ಶಾಸಕ ಮಹಾಂತೇಶ ದೊಡಗೌಡರ ಹೇಳಿದರು.

ಬಿಜೆಪಿ ಮುಖಂಡ ಚನ್ನಬಸಪ್ಪ ಮೂಕಾಶಿ, ಮಾಜಿ ಪಿಕೆಪಿಎಸ್ ಅಧ್ಯಕ್ಷ ರುದ್ರಪ್ಪ ಹೈಬತ್ತಿ, ಉಳವಪ್ಪ ಉಳ್ಳಾಗಡ್ಡಿ, ವಿಠ್ಠಲ ಹೈಬತ್ತಿ, ಮಾರುತಿ ಹೈಬತ್ತಿ, ಅಪ್ಪಣ್ಣ ಹಮ್ಮನ್ನವರ, ಶಿವಾನಂದ ಪಾಟೀಲ, ಸಿದ್ರಾಯಿ ಪೂಜೇರ, ಆನಂದ ಕೂಟಗಿ, ಈರಣ್ಣ ಶ್ರೀಪತಿ, ಭೀಮಸಿ ಹೈಬತ್ತಿ, ಬಸನಗೌಡ ಶಿದ್ರಾಮಣಿ, ಮಂಜು ಹಮ್ಮನ್ನವರ, ಈರಣ್ಣ ಗಣಾಚಾರಿ, ರಾಜು ಗಾಣಗಿ, ಶಂಕರ ಧರೆನ್ನವರ, ಪ್ರವೀಣ ಹೈಬತ್ತಿ ಹಾಗೂ ಅಧಿಕಾರಿಗಳು ಇದ್ದರು.

ವರದಿ ಪ್ರಕಟಿಸಿದ್ದ ವಿಜಯವಾಣಿ: ಸಂಪೂರ್ಣ ಹಾಳಾಗಿ ಸಾರ್ವಜನಿಕರ ಸಂಚಾರಕ್ಕೆ ತೀವ್ರ ಸಮಸ್ಯೆ ತಂದಿಟ್ಟಿದ್ದ ಇಟಗಿಕ್ರಾಸ್‌ನಿಂದ ತುರಮರಿ ವರೆಗಿನ ರಸ್ತೆ ದುಸ್ಥಿತಿ ಕುರಿತು ಜೂ.18ರಂದು ‘ರಸ್ತೆ ಹಾಳು ಜನರಿಗೆ ಗೋಳು’ ಶೀರ್ಷಿಕೆಯಡಿ ವಿಜಯವಾಣಿ ವರದಿ ಪ್ರಕಟಿಸಿ ಅಧಿಕಾರಿಗಳ ಹಾಗೂ ಜನಪ್ರತಿನಿಗಳ ಗಮನ ಸೆಳೆದಿತ್ತು. ವರದಿಗೆ ಸ್ಪಂದಿಸಿದ್ದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಈಗಾಗಲೇ ಅನುದಾನ ಮಂಜೂರಾಗಿದ್ದು, ಶೀಘ್ರದಲ್ಲೇ ಕಾಮಗಾರಿ ಆರಂಭಿಸುವುದಾಗಿ ಭರವಸೆ ನೀಡಿದ್ದರು.

ನೀಡಿದ ಭರವಸೆಯಂತೆ ಕ್ಷೇತ್ರದ ಶಾಸಕ ಮಹಾಂತೇಶ ದೊಡಗೌಡರ ಮತ್ತು ಪಿಡ್ಲುೃಡಿ ಇಲಾಖೆ ಅಧಿಕಾರಿಗಳು, ಸೋಮವಾರ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಪೂಜೆ ನೆರವೇರಿಸಿ, ಜನರ ಸಂಚಾರ ಸಮಸ್ಯೆಗೆ ಮುಕ್ತಿ ನೀಡುವ ಕಾರ್ಯ ಆರಂಭಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net