ಕಷ್ಟಗಳಿಗೆ ಸ್ಪಂದಿಸುವುದೇ ಧರ್ಮ

web2
ಇಂಚಲ ಗ್ರಾಮದಲ್ಲಿ ಸಮಾಜ ಸೇವಕ ನಾಗಪ್ಪ ಮೇಟಿ ಸಾರಥ್ಯದಲ್ಲಿ ಹಮ್ಮಿಕೊಂಡಿದ್ದ ಗುರುವಂದನೆ, ಸತ್ಕಾರ, ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಪೂರ್ಣಾನಂದ ಸ್ವಾಮೀಜಿ ಉದ್ಘಾಟಿಸಿದರು. ನಾಗಪ್ಪ ಮೇಟಿ, ಸದೆಪ್ಪ ವಾರಿ, ಯು.ಬಿ.ಉಳವಿ ಇತರರು ಇದ್ದರು.
Published on

ಬೈಲಹೊಂಗಲ: ಪರರ ಕಷ್ಟಗಳಿಗೆ ಸ್ಪಂದಿಸುವುದೇ ನಿಜವಾದ ಮಾನವ ಧರ್ಮವಾಗಿದ್ದು, ದೇವರು ನಮ್ಮನ್ನು ಭೂಮಿ ಮೇಲೆ ಕಳಿಸಿರುವುದು ಪರೋಪಕಾರ ಮಾಡಲು. ನಮ್ಮಿಂದಾದ ಸೇವೆ ಮಾಡಿ ಜೀವನ ಸಾರ್ಥಕಪಡಿಸಿಕೊಳ್ಳಬೇಕು ಎಂದು ಇಂಚಲದ ಪೂರ್ಣಾನಂದ ಸ್ವಾಮೀಜಿ ಹೇಳಿದರು.

ಸಮೀಪದ ಇಂಚಲ ಗ್ರಾಮದ ಶಿವಯೋಗಿಶ್ವರ ಕಲ್ಯಾಣ ಮಂಟಪದಲ್ಲಿ ಸಮಾಜ ಸೇವಕ ನಾಗಪ್ಪ ಮೇಟಿ ಹಾಗೂ ಗೆಳೆಯರ ಬಳಗದ ಸಾರಥ್ಯದಲ್ಲಿ ಗುರುವಂದನೆ, ನಿವೃತ್ತಿ ಹೊಂದಿರುವ ಮಾಜಿ ಸೈನಿಕರಿಗೆ, ವಿವಿಧ ಇಲಾಖೆಗಳ ನೌಕರರಿಗೆ ಭಾನುವಾರ ಹಮ್ಮಿಕೊಂಡಿದ್ದ ಸತ್ಕಾರ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಶಿವಾನಂದ ಭಾರತಿ ಅಪ್ಪನವರ ಶಿಕ್ಷಣ ಕ್ರಾಂತಿಯಿಂದ ಇಂಚಲ ಗ್ರಾಮ ಶಿಕ್ಷಕರು, ಸೈನಿಕರು, ಕೆಎಎಸ್ ಅಧಿಕಾರಿಗಳಿಂದ ತುಂಬಿದೆ. ಇಂಚಲ ಶಿಕ್ಷಣ ಕಾಶಿ ಎಂದು ಗುರುತಿಸಿಕೊಳ್ಳುತ್ತದೆ. ಸಮಾಜ ಸೇವಕ ನಾಗಪ್ಪ ಮೇಟಿ ಸಾಮಾಜ ಸೇವೆ ಶ್ಲಾಘನೀಯ ಎಂದರು.

ವಿಧಾನಸಭೆ ನಿವೃತ್ತ ಕಾರ್ಯದರ್ಶಿ ಯು.ಬಿ.ಉಳವಿ ಮಾತನಾಡಿ, ಸೈನಿಕರು, ರೈತರು ಈ ದೇಶದ ಎರಡು ಕಣ್ಣುಗಳಿದ್ದಂತೆ. ಶಿಕ್ಷಕರು ನಮ್ಮ ಭಾವಿ ಯುವ ಜನಾಂಗಕ್ಕೆ ತರಬೇತಿ ನೀಡಿ ಮಾರ್ಗದರ್ಶಿಗಳಾಗಿ ಕಾರ್ಯ ಮಾಡುತ್ತಾರೆ ಎಂದರು.

ಧಾರವಾಡ ಶಿಕ್ಷಣ ಇಲಾಖೆ ಜಂಟಿ ನಿರ್ದೆಶಕ ಗಜಾನನ ಮನ್ನಿಕೇರಿ ಮಾತನಾಡಿ, ಇಂಚಲ ಗ್ರಾಮವು ಶಿಕ್ಷಕರ ಗ್ರಾಮವಾಗಿ ಹೊರ ಹೊಮ್ಮಿದೆ. ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಉಚಿತವಾಗಿ ಪುಸ್ತಕ ವಿತರಣೆ, ಸಾಮಾಜಿಕ ಕಾರ್ಯಗಳನ್ನು ಮಾಡುತ್ತಿರುವುದು ಇತರರಿಗೂ ಪ್ರೇರಣೆ ಎಂದರು.

ಬೆಳಗಾವಿ ಸ್ಮಾರ್ಟ್‌ಸಿಟಿ ವ್ಯವಸ್ಥಾಪಕ ನಿರ್ದೇಶಕಿ ಸಯೀದಾಆಫ್ರೀನ್ ಬಾನು ಬಳ್ಳಾರಿ ಮಾತನಾಡಿ, ಯುವಕರು ಸುಮ್ಮನೆ ಮೋಜು-ಮಸ್ತಿ ಮಾಡುತ್ತ ತಾತ್ಕಾಲಿಕ ಸುಖ ಅನುಭವಿಸುತ್ತಾರೆ. ಅದರ ಬದಲಿಗೆ ವಿದ್ಯಾರ್ಥಿಗಳು ಮನಸ್ಸುಗೊಟ್ಟು ಓದಿ ಕಲಿಕೆಯಲ್ಲಿ ಮುಂದಿನ ಸಾಲಿನಲ್ಲಿರಬೇಕು ಎಂದರು.

ಹಿರಿಯ ಪತ್ರಕರ್ತ ಸಿ.ವೈ.ಮೆಣಶಿನಕಾಯಿ ರಚಿಸಿದ ‘ಮೇರು ಸಾಧಕರು ಮತ್ತು ಐತಿಹಾಸಿಕ ಸ್ಥಳಗಳು’ ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮ ನಡೆಯಿತು. ಸೈನಿಕರು, ಪ್ರತಿಭಾವಂತ ವಿದ್ಯಾರ್ಥಿಗಳು, ಸಾಧಕರನ್ನು ಸತ್ಕರಿಸಲಾಯಿತು.


ಕೆಎಎಸ್ ಅಧಿಕಾರಿಗಳಾದ ಅಶೋಕ ಮಿರ್ಜಿ, ವೈ.ಎಸ್.ಸಿಂಗನ್ನವರ, ರಾಜೇಶ ಅಮ್ಮಿನಭಾವಿ, ಸುರೇಶ ಪಾಟೀಲ, ಅಬ್ದುಲ್ ರಶೀಸ್ ಮಿರ್ಜನ್ನವರ, ಎಸ್.ಕೆ.ಸಯ್ಯದ್, ಡಾ.ಎಂ.ಎಸ್.ರಾಹುತನವರ, ಎಸ್.ವೈ.ಮಾರಿಹಾಳ, ಅಶೋಕ ಮಲಬನ್ನವರ, ಡಾ.ಮಹೇಶ ಕಾಪಸೆ, ಎಂ.ಆರ್.ಹಾರುಗೊಪ್ಪ, ಶಿವನಗೌಡ ಪಾಟೀಲ, ಸಮಾಜ ಸೇವಕ ನಾಗಪ್ಪ ಮೇಟಿ, ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಸದೆಪ್ಪ ವಾರಿ, ಉಪಾಧ್ಯಕ್ಷ ಭೀಮಪ್ಪ ಸೋಮನ್ನವರ, ಬಸವರಾಜ ಸಾವಳಗಿ, ರುದ್ರಪ್ಪ ಕಾಜಗಾರ, ರುದ್ರಪ್ಪ ಬಾಗೇವಾಡಿ, ರುದ್ರಪ್ಪ ಪಟ್ಟಣಶೆಟ್ಟಿ, ಆನಂದ ಜಂಬಗಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net