

ಯಡ್ರಾಮಿ: ಶ್ರೀ ಸಿದ್ಧರಾಮ ಮಹಾಸ್ವಾಮಿಗಳು ಶ್ರೇಷ್ಠ ಸಂತರಾಗಿದ್ದು, ಅಸಂಖ್ಯಾತ ಜನರ ಕಷ್ಟಗಳನ್ನು ನಿವಾರಿಸುವ ವೈದ್ಯರಾಗಿದ್ದರು ಎಂದು ಸೊನ್ನ ದಾಸೋಹ ಮಠದ ಶ್ರೀ ಡಾ.ಶಿವಾನಂದ ಸ್ವಾಮೀಜಿ ನುಡಿದರು.
ಶ್ರೀ ಮುರುಘೇಂದ್ರ ಶಿವಯೋಗಿ ವಿರಕ್ತ ಮಠದ ಶ್ರೀ ಸಿದ್ಧರಾಮ ಮಹಾಸ್ವಾಮಿಗಳ ತೃತೀಯ ಪುಣ್ಯಸ್ಮರಣೆ ನಿಮಿತ್ತ ಬುಧವಾರ ಹಮ್ಮಿಕೊಂಡಿದ್ದ ಉಚಿತ ನೇತ್ರ ತಪಾಸಣೆ, ಕಣ್ಣಿನ ಪೆÇರೆ ಶಸ್ತ್ರಚಿಕಿತ್ಸೆ ಹಾಗೂ ರಕ್ತದಾನ ಶಿಬಿರದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿ, ಸಿದ್ಧರಾಮ ಶ್ರೀಗಳು ಸರಳ, ಸೌಮ್ಯ ಸ್ವಭಾವದವರಾಗಿದ್ದರು. ತ್ರಿಕಾಲ ಲಿಂಗ ಪೂಜಾ ನಿಷ್ಠರಾಗಿದ್ದರು. ಸಮಾಧಾನದಿಂದ ಭಕ್ತರ ಸಮಸ್ಯೆ ಆಲಿಸಿ ಪರಿಹಾರ ಕಲ್ಪಿಸುವ ಮೂಲಕ ಅಸಂಖ್ಯಾತ ಜನರ ಆರಾಧ್ಯ ದೈವವಾಗಿದ್ದರು ಎಂದು ಬಣ್ಣಿಸಿದರು.
ಸುರಪುರ ನಿಷ್ಠಿ ಕಡ್ಲೆಪ್ಪನವರ ಮಠದ ಶ್ರೀ ಪ್ರಭುಲಿಂಗ ಸ್ವಾಮೀಜಿ, ವಡ್ಡೊಡಗಿ ನಂದಿ ಮಠದ ಶ್ರೀ ವೀರಸಿದ್ಧ ಸ್ವಾಮೀಜಿ, ವಿರಕ್ತಮಠದ ಪೀಠಾಧಿಪತಿ ಶ್ರೀ ಸಿದ್ಧಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಪ್ರಮುಖರಾದ ಬಸವರಾಜಗೌಡ ಪಾಟೀಲ್ ನರಿಬೋಳ, ದಂಡಪ್ಪ ಸಾಹು ಕುಳಗೇರಿ, ರಾಜಶೇಖರ ಸಾಹು ಸೀರಿ, ಡಾ.ಸಿದ್ಧು ಪಾಟೀಲ, ಡಾ. ವೈ.ಎ.ಛಾಯಾಗೋಳ, ಡಾ.ಉಮೇಶ ಶರ್ಮಾ, ಡಾ.ಸಂದೀಪ ಮಳ್ಳಿ, ಡಾ.ರಾಜಕುಮಾರ ಅರಳಗುಂಡಗಿ, ಡಾ.ಪ್ರಕಾಶ ಹವಲ್ದಾರ, ಡಾ.ಉಮೇಶ ಭದ್ರಶೆಟ್ಟಿ, ನಾಗಣ್ಣ ಬಿರಾದಾರ, ಸಿದ್ದು ಅಂಗಡಿ ಇತರರಿದ್ದರು.
ಕಾರ್ಯಕ್ರಮಕ್ಕೂ ಮುನ್ನ ಶ್ರೀ ಸಿದ್ಧರಾಮ ಸ್ವಾಮಿಗಳ ಕರ್ತೃ ಗದ್ದುಗೆಗೆ ಮಹಾರುದ್ರಾಭಷೇಕ, ಅಲಂಕಾರ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮ ನೆರವೇರಿದವು.