ಕೃಷ್ಣನ ಕೊಳಲಿಗೆ ರಾಧೆಯರ ನೃತ್ಯ

srikristna
ತೇರದಾಳ ಪಟ್ಟಣದ ಡ್ರೀಂ ಕಿಡ್ಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ರಾಧಾ ಕೃಷ್ಣ ವೇಷಧರಿಸಿಕೊಂಡು ಗಮನಸೆಳೆದ ಮಕ್ಕಳು.
Published on

ತೇರದಾಳ: ರಾಧಾ ಕೃಷ್ಣರ ವೇಷಧರಿಸಿ ಕೃಷ್ಣನ ಕೊಳಲಿಗೆ ಹೆಜ್ಜೆ ಹಾಕುವ ರಾಧೆಯರ ದೃಶ್ಯಗಳು ನೋಡುಗರ ಗಮನಸೆಳೆದವು.

ಪಟ್ಟಣದ ಡ್ರೀಂ ಕಿಡ್ಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಗುರುವಾರ ಹಮ್ಮಿಕೊಂಡ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮ ನಡೆಯಿತು.

ಶಾಲಾ ಮಕ್ಕಳು ರಾಧಾ ಕೃಷ್ಣರ ವೇಷಧರಿಸಿಕೊಂಡು ಮೈದಾನದಲ್ಲಿ ಕೃಷ್ಣ ಲೀಲೆಗಳ ಹಲವು ಭಂಗಿಗಳಲ್ಲಿ ಅಭಿನಯ ಪ್ರದರ್ಶಿಸಿಸುವುದು ದ್ವಾಪಾರಯುಗ ನೆನಪಿಸುವಂತಿತ್ತು. ಕಾರ್ಯಕ್ರಮವನ್ನು ಭಾವಚಿತ್ರ ಪೂಜೆಯೊಂದಿಗೆ ಚಾಲನೆ ನೀಡಲಾಯಿತು.

ಸಂಸ್ಥೆ ಅಧ್ಯಕ್ಷ ಶ್ರೀಶೈಲ ಹಿರೇಮಠ ಮಾತನಾಡಿ, ಮಕ್ಕಳ ವೇಷಭೂಷಣವು ಭಾರತೀಯ ಸಂಸ್ಕೃತಿಯ ಭಾಗವಾಗಿದ್ದು, ಮಕ್ಕಳಲ್ಲಿ ಶಿಕ್ಷಣದೊಂದಿಗೆ ಪಠ್ಯೇತರ ಚಟುವಟಿಕೆ ಭಾಗವಾಗಿ ದಿನಾಚರಣೆಗಳಲ್ಲಿ ವೇಷಭೂಷಣ ಮತ್ತು ನಾಟಕ ಪ್ರದರ್ಶನಗಳು ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಅನುಕೂಲವಾಗುತ್ತದೆ ಎಂದರು.

ಮುಖ್ಯಶಿಕ್ಷಕಿ ಅಶ್ವಿನಿ ಹಿರೇಮಠ, ಸಹಶಿಕ್ಷಕರಾದ ಸುಕ್ರುತಾ ಪಾಟೀಲ, ಸುಜಾತಾ ಜಕಾತಿ, ಉರ್ಮಿಳಾ ಮಾಂಡಿಕ್, ಸಪ್ನಾ ಕೋಲಕಾರ, ಮಲಪ್ರಭಾ ತಳವಾರ, ರಾಣಿ ಕೌಜಲಗಿ, ವೈಭವಿ ಕಾರಕೂನ, ಸಂಗೀತಾ ಕವನಿ, ಸ್ನೇಹಾ ಭೂರಸಿ, ಎಂ. ತಾಂಬೋಳಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net