ಕವಿವಿಗೆ ಪ್ರೊ. ಶಿವಪ್ಪ ಪ್ರಭಾರ ಕುಲಪತಿ

1 vikram 7
Published on

ಧಾರವಾಡ: ಕವಿವಿಯ ಪ್ರಭಾರ ಕುಲಪತಿಯಾಗಿ ಪ್ರೊ. ಶಿವಪ್ಪ ಅವರು ಪ್ರಭಾರ ಕುಲಪತಿ ಡಾ. ಟಿ.ಎಂ. ಭಾಸ್ಕರ್ ಅವರಿಂದ ಬುಧವಾರ ಅಧಿಕಾರ ಸ್ವೀಕರಿಸಿದರು. ಡಾ. ಟಿ.ಎಂ. ಭಾಸ್ಕರ್ ಅವರು ಸೇವಾ ನಿವೃತ್ತಿ ಹೊಂದಿದ ಹಿನ್ನೆಲೆಯಲ್ಲಿ ಸೇವಾ ಹಿರಿತನದ ಆಧಾರದ ಮೇಲೆ ಪ್ರೊ. ಶಿವಪ್ಪ ಅವರಿಗೆ ಅಧಿಕಾರ ವಹಿಸಲಾಗಿದೆ. ಪ್ರೊ. ಶಿವಪ್ಪ ಅವರು ಕರ್ನಾಟಕ ವಿಶ್ವ ವಿದ್ಯಾಲಯದ ಕೌಸಾಳಿ ನಿರ್ವಹಣಾ ಅಧ್ಯಯನ ಸಂಸ್ಥೆಯಲ್ಲಿ ಪ್ರಾಧ್ಯಾಪಕರಾಗಿದ್ದು, ವಿಶ್ವ ವಿದ್ಯಾಲಯದ ವ್ಯವಹಾರ ಅಧ್ಯಯನ ನಿಖಾಯದ ಡೀನ್ ಆಗಿ ಸಹ ಕಾರ್ಯ ನಿರ್ವಹಿಸುತ್ತಿದ್ದಾರೆ.ಅಧಿಕಾರಿ ಹಸ್ತಾಂತರ ಸಂದರ್ಭದಲ್ಲಿ ಕುಲಸಚಿವ ಡಾ. ಕೆ.ಟಿ. ಹನುಮಂತಪ್ಪ, ಮೌಲ್ಯಮಾಪನದ ಕುಲಸಚಿವ ಪ್ರೊ. ರವೀಂದ್ರನಾಥ ಕದಂ, ಪ್ರಭಾರ ಹಣಕಾಸು ಅಧಿಕಾರಿ ಪ್ರೊ. ಆರ್.ಆರ್. ಬಿರಾದಾರ, ವಿವಿಧ ನಿಖಾಯದ ಡೀನ್, ಸಿಂಡಿಕೇಟ್, ವಿದ್ಯಾ ವಿಷಯಕ ಪರಿಷತ್ ಸದಸ್ಯರು, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net