

ಚಾಮರಾಜನಗರ: ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನೌಕರರ ಸಂಘವು ನೌಕರರ ಒಳಿತಿಗಾಗಿ ಶ್ರಮಿಸುತ್ತಿದೆ ಎಂದು ಸಂಘದ ಅಧ್ಯಕ್ಷ ಕೆ.ಬಲರಾಮ್ ಹೇಳಿದರು.
ನಗರದ ವರನಟ ಡಾ.ರಾಜ್‌ಕುಮಾರ್ ಜಿಲ್ಲಾ ಕಲಾಮಂದಿರದಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನೌಕರರ ಸಂಘ, ಸ್ಥಳೀಯ ಸಮಿತಿ ಹಾಗೂ ಇನ್ನಿತರೆ ಸಮಿತಿ ಸಹಯೋಗದಲ್ಲಿ ಸೋಮವಾರ ಆಯೋಜಿಸಿದ್ದ 22 ನೇ ತ್ರೈ ವಾರ್ಷಿಕ ಮಹಾ ಅಧಿವೇಶನದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಅಪಘಾತ, ವಿದ್ಯುತ್ ಅವಘಡದಲ್ಲಿ ಮೃತಪಟ್ಟ ನೌಕರರ ಕುಟುಂಬಕ್ಕೆ 1.15 ಕೋಟಿ ರೂ. ಕೊಡುವಂತಹ ವ್ಯವಸ್ಥೆ ಹಾಗೂ ಸ್ವಾಭಾವಿಕ ಸಾವಿಗೆ 5 ಲಕ್ಷ ರೂ. ಕೊಡುವಂತಹ ವ್ಯವಸ್ಥೆಯನ್ನು ಸಂಘ ಮಾಡಿಸಿ ಕುಟುಂಬದವರಿಗೆ ಅನುಕೂಲ ಮಾಡಿಕೊಟ್ಟಿದೆ. ಈ ವರ್ಷದಲ್ಲಿ 12 ಮಂದಿ ನೌಕರರು ಮೃತಪಟ್ಟಿದ್ದಾರೆ. ನೌಕರರ ಕುಟುಂಬಕ್ಕೆ ಒಳ್ಳೆಯದಾಗುವ ನಿಟ್ಟಿನಲ್ಲಿ ಕೆಲಸ ಮಾಡಿದೆ. ಅಲ್ಲದೆ ಕವಿಪ್ರನಿ ನೌಕರರುಗಳಿಗೆ ಗುಣಮಟ್ಟದ ಸುರಕ್ಷತ ಕಿಟ್ ನೀಡುವಂತೆ ಸಂಘ ಬೇಡಿಕೆ ಇಟ್ಟಿದ್ದು, ನೌಕರರ ಒಳಿತಿಗಾಗಿ ಶ್ರಮಿಸುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ನೌಕರರ ಸಂಘದ ಕಾರ್ಯಾಧ್ಯಕ್ಷ ಡಾಕ್ಯಾ ನಾಯಕ್, ಹಿರಿಯ ಉಪಾಧ್ಯಕ್ಷ ಎಚ್.ಆರ್.ಅಶ್ಬಥಪ್ಪ, ಪ್ರಧಾನ ಕಾರ್ಯದರ್ಶಿ ಶಿವರಾಮ್, ಅಧಿಕ ಕಾರ್ಯದರ್ಶಿ ಸತ್ಯನಾರಾಯಣ, ಕುಮಾರ್, ಉಪ ಕಾರ್ಯದರ್ಶಿ ಸಂತೋಷ್, ಉಪಾಧ್ಯಕ್ಷ ಗೋವಿಂದರಾಜ, ಎಚ್.ವಿ.ಸಂದೀಪ್, ಎನ್.ಮಹೇಶ್, ಸ್ಥಳೀಯ ಸಮಿತಿ ಅಧ್ಯಕ್ಷ ಮುರುಳಿಕೃಷ್ಣಸ್ವಾಮಿ, ಕಾರ್ಯದರ್ಶಿ ಸಿದ್ದರಾಜಪ್ಪ, ಉಪಾಧ್ಯಕ್ಷ ಮಂಜುನಾಥ್, ಖಜಾಂಚಿ ರಮೇಶ್, ಸಹ ಕಾರ್ಯದರ್ಶಿ ಮಹೇಶ್, ನಿರ್ದೇಶಕ ರಾದ ರಾಜು, ಶಿವಪ್ಪ, ನಾಗರಾಜು, ಸೋಮಣ್ಣ, ಗುಂಡ್ಲುಪೇಟೆ ಪ್ರಾಥಮಿಕ ಸಮಿತಿ ಅಧ್ಯಕ್ಷ ಶರಣಬಸಪ್ಪ, ಕಾರ್ಯದರ್ಶಿ ಪ್ರಕಾಶ್, ಹರದನಹಳ್ಳಿ ಅಧ್ಯಕ್ಷ ಮಹದೇವಸ್ವಾಮಿ, ಕಾರ್ಯದರ್ಶಿ ಚನ್ನಂಜ ಕುಮಾರ್,ಚಾಮರಾಜನಗರ ವಿಭಾಗದ ಕಾರ್ಯನಿರ್ವಾಹಕ ಟಿ.ಪ್ರದೀಪ್, ಲೆಕ್ಕಾಧಿಕಾರಿ ಆರ್.ಭಾಸ್ಕರ್ ಹಾಗೂ ಇತರರು ಹಾಜರಿದ್ದರು.