

ರಾಯಚೂರು: ನಗರದ ಎಲ್‌ವಿಡಿ ಕಾಲೇಜಿನಲ್ಲಿ ತಾರಾನಾಥ ಶಿಕ್ಷಣ ಸಂಸ್ಥೆಯಿಂದ ಮಂಗಳವಾರ ಏರ್ಪಡಿಸಿದ್ದ ಸ್ವಾತಂತ್ರೋತ್ಸವ ಕಾರ್ಯಕ್ರಮದಲ್ಲಿ ಕೃಷಿ ಕ್ಷೇತ್ರದಲ್ಲಿ ಸಾಧನೆಗಾಗಿ ಸಿರವಾರ ತಾಲೂಕಿನ ಕವಿತಾಳದ ಕವಿತಾ ಮಿಶ್ರಾಗೆ ಪಂ.ತಾರಾನಾಥ ಪ್ರಶಸ್ತಿ ಪ್ರದಾನ ಮಾಡಲಾಯಿತು.
ತಾರಾನಾಥ ಶಿಕ್ಷಣ ಸಂಸ್ಥೆ ಅಧ್ಯಕ್ಷ ಪಾರಸಮಲ್ ಸುಖಾಣಿ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿ, ದೇಶ ಹಲವಾರು ಕ್ಷೇತ್ರಗಳಲ್ಲಿ ಪ್ರಗತಿಯನ್ನು ಸಾಸಿದೆ. ಆದರೆ ಭ್ರಷ್ಟಾಚಾರ ನಮ್ಮ ದೇಶಕ್ಕೆ ಅಂಟಿಕೊಂಡ ಕ್ಯಾನರ್ಸ್ ಆಗಿದೆ. ಭ್ರಷ್ಟಾಚಾರದಿಂದ ನ್ಯಾಯವನ್ನು ಉಳಿಸುವಲ್ಲಿ ವಿಲರಾಗಿದ್ದಾರೆ. ಭ್ರಷ್ಟಾಚಾರ ನಿರ್ಮೂಲನೆಗೆ ಯುವ ಜನತೆ ಮುಂದಾಗಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆ ಸಹ ಕಾರ್ಯದರ್ಶಿ ಅಂಬಾಪತಿ ಪಾಟೀಲ್ ಮಾತನಾಡಿ, ದೇಶ ಸ್ವಾತಂತ್ರ ಪಡೆಯಲು ಲಕ್ಷಾಂತರ ಜನರು ಬಲಿದಾನ ನೀಡಿದ್ದು, ಅದನ್ನು ಕಾಪಾಡಿಕೊಂಡು ಹೋಗುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಒಂದು ಲಕ್ಷ ರೂ. ನಗದು, ಸ್ಮರಣಿಕೆ, ಪ್ರಶಸ್ತಿ ಲಕ ಹೊಂದಿರುವ ಪಂ.ತಾರಾನಾಥ ಪ್ರಶಸ್ತಿಯನ್ನು ಕವಿತಾ ಮಿಶ್ರಾಗೆ ಹಾಗೂ ಕಳೆದ 50 ವರ್ಷಗಳಿಂದ ಹಣ್ಣು ಹಂಪಲು ಮಾರಿ ಜೀವನ ನಡೆಸುತ್ತಿರುವ ಮಂಗಮ್ಮ ಗುವ್ವಲದಿನ್ನಿಗೆ ಕಾಯಕ ಮಹಿಳೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಸಂಸ್ಥೆ ಕಾರ್ಯದರ್ಶಿ ಶ್ರೀನಿವಾಸ ನಂದಾಪುರ, ಕಾಲೇಜು ಆಡಳಿತ ಮಂಡಳಿ ಪದಾಕಾರಿಗಳಾದ ಪವನಕುಮಾರ ಸುಖಾಣಿ, ಶ್ರೀನಿವಾಸ ಜಟ್ರಂ, ಉಪನ್ಯಾಸಕರಾದ ರೇಖಾ ಪಾಟೀಲ್, ಡಾ.ಅರುಣಾ ಹಿರೇಮಠ, ಡಾ.ಕಮಲಾ ಹಾಗೂ ಕಾಲೇಜು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.