

ಧಾರವಾಡ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ತಾಲೂಕು ಕನ್ನಡ ಸಾಹಿತ್ಯ ಪರಿಷತ್, ಅಡವಿ ಪ್ರಕಾಶನ ಹಾಗೂ ಅರು ಪ್ರಕಾಶನ ಆಶ್ರಯದಲ್ಲಿ ಉಮಾದೇವಿ ಬಾಗಲಕೋಟ ರಚಿತ ‘ಅಂಗದೊಳಗಣ ಸವಿ’ ಎಂಬ ಕವನ ಸಂಕಲನ ಬಿಡುಗಡೆ ಸಮಾರಂಭವನ್ನು ಜಿಲ್ಲಾ ಕನ್ನಡ ಸಾಹಿತ್ಯ ಭವನದಲ್ಲಿ ಸೆ. 10ರಂದು ಬೆಳಗ್ಗೆ 10.30ಕ್ಕೆ ಏರ್ಪಡಿಸಲಾಗಿದೆ.
ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಕಾರ್ಯಕ್ರಮ ಉದ್ಘಾಟಿಸುವರು. ಕುಮಟಾದ ಕತೆಗಾರ ಡಾ. ಶ್ರೀಧರ ಬಳಗಾರ ಪುಸ್ತಕ ಬಿಡುಗಡೆ ಮಾಡುವರು. ಬೆಳಗಾವಿಯ ಕವಿಗಳಾದ ಡಾ.ಶೋಭಾ ನಾಯಕ ಪುಸ್ತಕ ಪರಿಚಯ ಮಾಡುವರು. ಅತಿಥಿಗಳಾಗಿ ಕೌಶಲಾಭಿವೃದ್ಧಿ ಅಧಿಕಾರಿ ಡಾ. ಬಸವಪ್ರಭು ಹಿರೇಮಠ, ಅಡವಿ ಪ್ರಕಾಶನದ ಸಂಚಾಲಕ ಗುರು ಹಿರೇಮಠ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಹಾಂತೇಶ ನರೇಗಲ್ಲ ಆಗಮಿಸುವರು. ಕಸಾಪ ಜಿಲ್ಲಾಧ್ಯಕ್ಷ ಡಾ. ಲಿಂಗರಾಜ ಅಂಗಡಿ ಅಧ್ಯಕ್ಷತೆ ವಹಿಸುವರು ಎಂದು ಪ್ರಕಟಣೆ ತಿಳಿಸಿದೆ.