

ಗಿರಿ ಜಿಲ್ಲೆ ಮಹಿಳಾ ಪಿಡಿಒಗಳಿಂದ ಹಿರಿಯ ಅಧಿಕಾರಿ ಗರೀಮಾ ಪನ್ವಾರ್‌ಗೆ ಸೀಮಂತ
ಕಳ್ಳು-ಬಳ್ಳಿ ಒಂದಾಗಿಸಿದ ಕರ‍್ಯಕ್ರಮ
ವಿಜಯವಾಣಿ ಸುದ್ದಿಜಾಲ ಯಾದಗಿರಿ
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆಗಿ ೧೭ ತಿಂಗಳು ಕರ್ತವ್ಯ ನಿರ್ವಹಿಸಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನಿರ್ದೇಶಕಿಯಾಗಿ ವರ್ಗವಾಗಿರುವ ಗರೀಮಾ ಪನ್ವಾರ್ ಅವರ ಬೀಳ್ಕೊಡುಗೆ ಸೀಮಂತ ಕರ‍್ಯಕ್ರಮವಾಗಿ ಮಾರ್ಪಟ್ಟು ನೂರಾರು ಮಹಿಳೆಯರು ಬಂಧು-ಬಳಗದವರAತೆ ಸಂಭ್ರಮಿಸಿದ P್ಷÀಣಕ್ಕೆ ಜಿಪಂ ಸಭಾಂಗಣ ಶುಕ್ರವಾರ ಸಾಕ್ಷಿಯಾಯಿತು.
ಅಧಿಕಾರಿ ಗರೀಮಾ ಪನ್ವಾರ್ ಗರ್ಭಿಣಿ ಎಂಬ ಮಾಹಿತಿ ಪಡೆದ ಜಿ¯್ಲೆಯ ನೂರಾರು ಮಹಿಳಾ ಪಿಡಿಒಗಳು ಈ ಸಮಯ ಸೂಕ್ತ ಎಂದು ನಿರ್ಧರಿಸಿ ಸೀಮಂತ ಕರ‍್ಯಕ್ರಮದ ತಯಾರಿ ಮಾಡಿಕೊಂಡು ಸಭಾಂಗಣಕ್ಕೆ ಆಗಮಿಸಿದ್ದರು.
ಮೇಡಂ ಅವರನ್ನು ಸತ್ಕರಿಸುವ ನೆಪದಲ್ಲಿ ವೇದಿಕೆ ಏರಿದ ಹತ್ತಾರು ಮಹಿಳಾ ಅಧಿಕಾರಿಗಳು, ನಮ್ಮ ಕಡೆ ಗರ್ಭಿಣಿಯರಿಗೆ ಸೀಮಂತ ಮಾಡುವುದು ಸಂಪ್ರದಾಯ. ತಾವು ಬೇಡವೆನ್ನದೆ ನಮ್ಮ ಈ ಕೋರಿಕೆಯನ್ನು ಮನ್ನಿಸಬೇಕು ಎಂದು ಮನವಿ ಮಾಡಿದಾಗ ನಗುತ್ತಲೇ ಆಯ್ತು ಮಾಡಿ ಎಂದು ಪನ್ವಾರ್ ಹೇಳಿದಾಗ ಆಯೋಜಕರ ಸಂತೋಷ ಇಮ್ಮಡಿಗೊಂಡಿತು.
ಕುರ್ಚಿ ಮೇಲೆ ಅವರನ್ನು ಕೂಡಿಸಿ ಸಂಪ್ರದಾಯದAತೆ ಸೀರೆ ಉಡಿಸಿ, ಹಸಿರು ಬಳೆ ತೊಡಿಸಿ, ದಂಡಿಹಾರ ಕಟ್ಟಿ, ಹಣೆಗೆ ಅರಿಶಿನ ಕುಂಕುಮ ಹಚ್ಚಿ ಬೃಹತ್ ಹೂವಿನ ಹಾರ ಹಾಕಿ ಕಲ್ಯಾಣ ಕರ್ನಾಟಕದ ಸೀಮಂತ ಪರಂಪರೆಯನ್ನು ಅನಾವರಣಗೊಳಿಸಿದರು.
ವೇದಿಕೆ ಸುತ್ತುವರಿದ ಮಹಿಳೆಯರು ೧೧ ವಿಧದ ಹಣ್ಣು, ಸಿಹಿ ಪದಾರ್ಥ, ಎಲೆ ಅಡಿಕೆ, ಉಡಿಅಕ್ಕಿ ನೀಡುವ ಮೂಲಕ ತಾಯ್ತನದ ಸೊಬಗು ಮೂಡಿಸಿದ್ದಲ್ಲದೆ ಹಾಡುಗಳನ್ನು ಹಾಡಿ ಸಾರ್ಥಕದ ಗೌರವವನ್ನು ಮಹಿಳಾ ಪಿಡಿಒಗಳು ನೀಡುವ ಮೂಲಕ ಪನ್ವಾರ್ ಮನೆತನ ಕಳ್ಳು-ಬಳ್ಳಿಯೇ ಇಲ್ಲಿ ಸೇರಿದೆ ಎಂಬ ವಾತಾವರಣ ಸೃಷ್ಟಿಸಿದರು.
ಇಡೀ ಸಭಾಂಗಣ ಗರೀಮಾ ಪನ್ವಾರ್ ಸೀಮಂತ ಕರ‍್ಯಕ್ರಮದ ಸಂತೋಷ ಅನುಭವಿಸುವ ಮೂಲಕ ಹೆಣ್ಣಿನ ಸಾರ್ಥಕತೆ ಮೆರೆಯಿತು.
ನನ್ನ ಜೀವನದಲ್ಲಿ ಮರೆಯಲಾರದಂಥ ಅದ್ಭುತ ಕ್ಷಣ ಇದಾಗಿದೆ. ನಿಮ್ಮ ಈ ಹೃದಯವಂತಿಕೆಯ ಸತ್ಕಾರ ನನಗೆ ಇಂದು ನಮ್ಮ ಕುಟುಂಬಸ್ಥರ ಜತೆ ಸೀಮಂತ ಮಾಡಿಕೊಂಡಷ್ಟೇ ಖುಷಿ ತಂದುಕೊಟ್ಟಿದೆ.
| ಗರೀಮಾ ಪನ್ವಾರ್