ಕಳ್ಳರ ಬೆನ್ನಟ್ಟಿ ಬಂಧನ, ೧೨ ಬೈಕ್ ಜಪ್ತಿ

Crime Logo
Published on

ಕಲಬುರಗಿ: ನಗರದಲ್ಲಿ ಪೆಟ್ರೋಲಿಂಗ್‌ನಲ್ಲಿದ್ದ ಪೊಲೀಸರ ಎದುರಿನಿಂದ ಹೋಗುತ್ತಿದ್ದ ಅನುಮಾನಾಸ್ಪದ ಮೂವರನ್ನು ಬೆನ್ನಟ್ಟಿ ಹಿಡಿದು ವಿಚಾರಿಸಿದಾಗ ಬೈಕ್ ಕಳ್ಳರು ಎಂಬುದು ತಿಳಿದಿದ್ದು, ಅವರಿಂದ ೧೨ ಬೈಕ್ ಜಪ್ತಿ ಮಾಡಿಕೊಳ್ಳಲಾಗಿದೆ.

ಅಫಜಲಪುರ ಮುಖ್ಯ ರಸ್ತೆಯಲ್ಲಿನ ಶರಣಸಿರಸಗಿ ಬಳಿ ಪೆಟ್ರೋಲಿಂಗ್ ಬಳಿ ಇದ್ದಾಗ ನಂಬರ್ ಪ್ಲೇಟ್ ಇಲ್ಲದ ಬೈಕ್ ಮೇಲೆ ಹೋಗುತ್ತಿದ್ದ ಬಿದ್ದಾಪುರ ಕಾಲನಿಯ ಪವನ ಮಡಿವಾಳ, ಖರ್ಗೆ ಕಾಲನಿಯ ಕಿರಣ ಕಟಬಾರ, ಸಾವಿತ್ರಿಬಾಯಿ ಫುಲೆ ಕಾಲನಿಯ ಅಭಿಷೇಕ ಚಲುವಾದಿಯನ್ನು ಬಂಧಿಸಿದ್ದಾರೆ.

ಮೂವರನ್ನು ವಿಚಾರಿಸಿದಾಗ ಬೈಕ್ ಕಳ್ಳತನದ ಮಾಹಿತಿ ನೀಡಿದ್ದು, ಹೆಚ್ಚಿನ ವಿಚಾರವಣೆ ವೇಳೆ ನಗರದ ವಿವಿಧೆಡೆ ಬೈಕ್ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಕದ್ದ ಬೈಕ್‌ಗಳನ್ನು ಸಾವಿತ್ರಿಬಾಯಿ ಫುಲೆ ನಗರದ ಖುಲ್ಲಾ ಜಾಗದಲ್ಲಿ ಇಡಲಾಗಿದೆ ಎಂದು ತಿಳಿಸಿದ್ದು, ಅಲ್ಲಿಗೆ ಹೋಗಿ ಸ್ಥಳ ಪರಿಶೀಲನೆ ವೇಳೆ ೧೧ ಬೈಕ್ ಪತ್ತೆ ಆಗಿವೆ. ಸಂಗ್ರಹಿಸಿ ಇಟ್ಟಿದ್ದ ೧೧ ಮತ್ತು ಪೆಟ್ರೋಲಿಂಗ್ ವೇಳೆ ಬೆನ್ನಟ್ಟಿದ್ದ ೧ ಬೈಕ್ ಸೇರಿ ಒಟ್ಟು ೫.೪೦ ಲಕ್ಷ ರೂ. ಮೌಲ್ಯದ ೧೨ ಬೈಕ್‌ಗಳನ್ನು ಮತ್ತು ಮೂರು ಮೊಬೈಲ್ ಫೋನ್‌ಗಳನ್ನು ಜಪ್ತಿ ಮಾಡಿ, ಆರೋಪಿಗಳನ್ನು ಬಂಧಿಸಿದ್ದಾರೆ. ನಂಬರ್ ಪ್ಲೇಟ್ ಬದಲಾಯಿಸಿ, ಕಿತ್ತು ಬಿಸಾಡಿರುವ ಕುರಿತು ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net