ಕಳ್ಳರ ಬಂಧನ, ೧೦ ತೊಲೆ ಚಿನ್ನ ಜಪ್ತಿ

3BK1
ಬಸವಕಲ್ಯಾಣದ ಸಿಪಿಐ ಕಚೇರಿಯಲ್ಲಿ ಬುಧವಾರ ನಡೆದ ಹೆಚ್ಚುವರಿ ಜಿಲ್ಲಾ ಹೆಚ್ಚುವರಿ ಎಸ್ಪಿ ಮಹೇಶ ಮೇಘಣ್ಣನವರ ಮಾತನಾಡಿದರು. ಎಎಸ್ಪಿ ಶಿವಾಂಶು ರಾಜಪುತ, ಸಿಪಿಐ ರಘುವೀರಸಿಂಗ್ ಠಾಕೂರ್, ನಗರ ಠಾಣೆಯ ಪಿಎಸ್‌ಐ ಅಂಬ್ರೀಷ್ ವಾಗ್ಮೋಡೆ, ಕ್ರೈಂ ಪಿಎಸ್‌ಐ ನಂದಕುಮಾರ ಮುಳೆ ಇದ್ದರು.
Published on

ಬಸವಕಲ್ಯಾಣ: ವಿವಿಧ ಕಳ್ಳತನ ಪ್ರಕರಣದಲ್ಲಿ ಭಾಗಿಯಾದ ಮೂವರು ಕಳ್ಳರನ್ನು ಬಂಧಿಸಿ ೧೦ ತೊಲೆ ಚಿನ್ನ ಹಾಗೂ ೨೨ ತೊಲೆ ಬೆಳ್ಳಿ ಸೇರಿ ೬ ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಹೇಶ ಮೇಘಣ್ಣನವರ ತಿಳಿಸಿದರು.

ಬಂಧಿತರು ಈ ಹಿಂದೆ ವಿವಿಧ ನಾಲ್ಕು ಪ್ರಕರಣದಲ್ಲಿ ಭಾಗಿಯಾಗಿದ್ದರು. ಮೂಲತಃ ಬೀದರಿನವರಾಗಿದ್ದು ಹೈದರಾಬಾದ್‌ನಲ್ಲಿ ಕೆಲಸ ಮಾಡುತ್ತಿದ್ದರು. ಈ ಮೂವರು ನಗರದ ನಾಗಣ್ಣ ಕಟ್ಟೆ ಬಳಿ ಆಗಮಿಸಿದಾಗ ರಾತ್ರಿ ಕರ್ತವ್ಯದಲ್ಲಿ ಪೊಲೀಸರು ವಿಚಾರಿಸಿದಾಗ ಸಮರ್ಪಕ ಉತ್ತರ ನೀಡದಿದ್ದಾಗ ಠಾಣೆಗೆ ಕರೆತಂದು ಹೆಚ್ಚಿನ ವಿಚಾರಣೆ ನಡೆಸಿದಾಗ ಕಳ್ಳತನದ ವಿಷಯ ಬಾಯ್ಬಿಟ್ಟಿದ್ದಾರೆ ಎಂದು ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಎಸ್ಪಿ ಚನ್ನಬಸವಣ್ಣ ಲಂಗೋಟಿ, ಎಎಸ್‌ಪಿ ಶಿವಾಂಶು ರಾಜಪುತ, ಸಿಪಿಐ ರಘುವೀರಸಿಂಗ್ ಠಾಕೂರ್ ಮಾರ್ಗದರ್ಶನದಲ್ಲಿ ನಗರ ಠಾಣೆ ಕ್ರೈಂ ಪಿಎಸ್‌ಐ ನಂದಕುಮಾರ ಮುಳೆ ಹಾಗೂ ಈ ಹಿಂದಿನ ನಗರ ಠಾಣೆಯ ಪಿಎಸ್‌ಐ ಅಮರ ಕುಲಕರ್ಣಿ ಹೆಚ್ಚಿನ ತನಿಖೆ ನಡೆಸಿ ಬಂಧಿತರಿಂದ ಚಿನ್ನ ಹಾಗೂ ಬೆಳ್ಳಿ ಸೇರಿ ಇತರ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿಸಿದರು.

ಎಎಸ್‌ಪಿ ಶಿವಾಂಶು ರಾಜಪುತ, ಸಿಪಿಐ ರಘುವೀರಸಿಂಗ್ ಠಾಕೂರ್, ನಗರ ಠಾಣೆಯ ಪಿಎಸ್‌ಐ ಅಂಬ್ರೀಷ್ ವಾಗ್ಮೋಡೆ, ಕ್ರೈಂ ಪಿಎಸ್‌ಐ ನಂದಕುಮಾರ ಮುಳೆ ಹಾಗೂ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net