ಕಳ್ಳರ ಪಾಲಾಯಿತು 20 ಚೀಲ ಶೇಂಗಾ

14ANG1
Published on

ಅಣ್ಣಿಗೇರಿ: ತಾಲೂಕಿನಾದ್ಯಂತ ನಿರಂತರ ಮಳೆ ಸುರಿದು ರೈತರ ಬೆಳೆ ನಾಶವಾಗಿದ್ದು ಒಂದೆಡೆಯಾಗಿದ್ದರೆ. ಬರುವಷ್ಟು ಬೆಳೆ ಕೈಗೆ ಬರಲಿ ಎಂದು ರಾಶಿ ಮಾಡಿ ಶೇಂಗಾ ತುಂಬಿದ ಟ್ರೇಲರ್ ಅನ್ನು ಹೊಲದಲ್ಲೇ ಬಿಟ್ಟು ಬಂದಿದ್ದ ರೈತನಿಗೆ ಕಳ್ಳರು ಗಾಯದ ಮೇಲೆ ಬರೆ ಎಳೆದಿದ್ದಾರೆ.

ತಾಲೂಕಿನ ಹಳ್ಳಿಕೇರಿ ಗ್ರಾಮದ ರೈತ ಶೇಖಪ್ಪ ಡಂಬಳ ಎಂಬುವವರು ಸೋಮವಾರ ಹೊಲದಲ್ಲಿ ಶೇಂಗಾ ಬೆಳೆಯನ್ನು ಸ್ವಚ್ಛಗೊಳಿಸಿ ಟ್ರೇಲರ್​ನಲ್ಲಿ ರಕ್ಷಣೆ ಮಾಡಿ ಅಲ್ಲಿಯೇ ವಾಸ್ತವ್ಯ ಮಾಡಿದ್ದರು. ಆದರೆ, ಮಂಗಳವಾರ ತಡರಾತ್ರಿ ಜೋರಾಗಿ ಮಳೆ ಬಂದಿದ್ದರಿಂದ ಗಾಡಿಯನ್ನು ಅಲ್ಲಿಯೇ ಬಿಟ್ಟು ಮನೆಗೆ ಬಂದಿದ್ದರು.

ಬುಧವಾರ ಬೆಳಗಿನ ಜಾವ ಹೊಲದಲ್ಲಿ ಹೋಗಿ ನೋಡಿದರೆ ಸುಮಾರು ಇಪ್ಪತ್ತು ಚೀಲಕ್ಕೂ ಹೆಚ್ಚು ಶೇಂಗಾ ಹಾಗೂ ಒಂದು ತಾಡಪತ್ರಿ ಕಳ್ಳರ ಪಾಲಾಗಿತ್ತು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net