ಕಳ್ಳರ ಕೃತ್ಯದ ಶಂಕೆ ಸಗಟು ಕಿರಾಣ ಅಂಗಡಿಗೆ ಬೆಂಕಿ

3112Klb08
Published on

ಕಲಬುರಗಿ: ಕಳ್ಳತನ ಮಾಡಲು ಬಂದ ಖದೀಮರಿಗೆ ಹಣ ಸಿಗದೆ ಹೋದಾಗ ಅಂಗಡಿಗೆ ಬೆಂಕಿಯಿಟ್ಟ ಘಟನೆ ನೆಹರು ಗಂಜ್ನಲ್ಲಿ ಗುರುವಾರ ನಸುಕಿನ ಜಾವ ನಡೆದಿದೆ. ಕೃಷ್ಣಾ ಎಂಬುವರಿಗೆ ಸೇರಿದ ಕೃಷ್ಣಾ ಹೋಲ್ಸೇಲ್ ಕಿರಾಣ ಟ್ರೇಡರ್ಸ್ಗೆ ಬೆಂಕಿ ಹೊತ್ತಿ ಅಪಾರ ಪ್ರಮಾಣದ ವಸ್ತುಗಳು ಸುಟ್ಟು ಕರಲಾಗಿವೆ. ಕಳ್ಳರು ಅಂಗಡಿ ಶೆಟರ್ ಮುರಿದು ಒಳನುಗ್ಗಿ ಗಲ್ಲಾ, ಲಾಕರ್ ತಡಕಾಡಿದ್ದಾರೆ. ಹಣ ಸಿಗದಿದ್ದಾಗ ಬೆಂಕಿ ಹಚ್ಚಿ ಕಾಲ್ಕಿತ್ತಿದ್ದಾರೆ ಎನ್ನಲಾಗುತ್ತಿದೆ. ಮಳಿಗೆಯಲ್ಲಿದ್ದ ಎಣ್ಣೆ ಪ್ಯಾಕೆಟ್, ಡಬ್ಬಾ, ಅಕ್ಕಿ ಚೀಲ, ಬಿಸ್ಕಟ್, ಸಾಬೂನು, ಬೇಳೆ-ಬೆಲ್ಲ ಹೀಗೆ ಎಲ್ಲ ತೆರನಾದ ವಸ್ತುಗಳು ಬೆಂಕಿಯಲ್ಲಿ ಸುಟ್ಟು ಹೋಗಿವೆ. ಒಂದು ಕೋಟಿ ರೂ. ಹಾನಿ ಆಗಿರುವ ಅಂದಾಜಿದೆ. ಮಾಹಿತಿ ಅರಿಯುತ್ತಲೇ ಅಗ್ನಿಶಾಮಕ ಸಿಬ್ಬಂದಿ ಎರಡು ವಾಹನಗಳೊಂದಿಗೆ ದೌಡಾಯಿಸಿ ಬೆಂಕಿಯನ್ನು ನಂದಿಸಿದರು. ಬೆಂಕಿ ಆಕಸ್ಮಿಕವೋ ಅಥವಾ ಕಳ್ಳರ ಕೃತ್ಯವೋ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಚೌಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net