

ಕಲಬುರಗಿ: ಮನೆಯ ಬೀಗ ಮುರಿದು ಚಿನ್ನಾಭರಣ ಕಳವು ಮಾಡಿದ್ದ ಕಳ್ಳನನ್ನು ರಾಘವೇಂದ್ರ ನಗರ ಠಾಣೆ ಪೊಲೀಸರು ಶನಿವಾರ ಬಂಧಿಸಿದ್ದಾರೆ. ಶಹಾ ಜಿಲಾನಿ ದರ್ಗಾ ಹತ್ತಿರದ ಮದಿನಾ ಕಾಲನಿ ನಿವಾಸಿ ಮಹ್ಮದ್ ರಫೀಕ್ ಇನಾಮದಾರ (೩೮) ಬಂಧಿತ ಚೋರ. ೫.೫೦ ಲಕ್ಷದ ೧೦೯ ಗ್ರಾಂ ಚಿನ್ನಾಭರಣ ವಶಪಡಿಸಿಕೊಂಡು ಬಂಧಿತನನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ. ನ್ಯೂ ರಾಘವೇಂದ್ರ ಕಾಲನಿಯ ಶಿವಶರಣಪ್ಪö್ಪ ಬೆಳಗುಂಪಿ ಮನೆಗೆ ಬೀಗ ಹಾಕಿ ಹೈದರಾಬಾದ್‌ಗೆ ಹೋಗಿದ್ದಾಗ ೨೦೨೦ರ ನ.೧೬ರಂದು ಬೀಗ ಮುರಿದು ನಗನಾಣ್ಯ ಕಳವು ಮಾಡಿದ್ದ. ಪೊಲೀಸ್ ಆಯುಕ್ತ ಡಾ.ರವಿಕುಮಾರ, ಡಿಸಿಪಿಗಳಾದ ಅಡ್ಡೂರು ಶ್ರೀನಿವಾಸುಲು, ಶ್ರೀಕಾಂತ ಕಟ್ಟಿಮನಿ, ಎಸಿಪಿ ಗಿರೀಶ ಎಸ್.ಬಿ. ಮಾರ್ಗದರ್ಶನದಲ್ಲಿ ಇನ್‌ಸ್ಪೆಕ್ಟರ್ ಶಿವಾನಂದ ಗಾಣಗೇರ ನೇತೃತ್ವದಲ್ಲಿ ಸಿಬ್ಬಂದಿ ಶಿಖರೇಶ್ವರ, ಮುಜಾಹಿದ್ ಕೋತ್ವಾಲ್, ರಮೇಶ ಚವ್ಹಾಣ್, ಆತ್ಮಕುಮಾರ, ಶರಣಬಸವ, ಉಮೇಶ, ಸುಧಾ ಕಾರ್ಯಾಚರಣೆ ನಡೆಸಿ ಕಳ್ಳನನ್ನು ಬಂಧಿದ್ದಾರೆ. ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.