

ಮಂಗಳೂರು : ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಕಳ್ಳತನ ಪ್ರಕರಣ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕಳ್ಳತನ ಪ್ರಕರಣಗಳಲ್ಲಿ ಈ ಹಿಂದೆ ಭಾಗಿಯಾಗಿರುವ 252 ಮಂದಿಯನ್ನು ಪೊಲೀಸರು ವಿಚಾರಣೆಗೆ ವಶಕ್ಕೆ ಪಡೆದಿದ್ದಾರೆ.
ಕೋವಿಡ್-19 ಸಾಂಕ್ರಾಮಿಕ ರೋಗದ ಪ್ರಯುಕ್ತ ಹಾಕಲಾದ ಲಾಕ್‌ಡೌನ್' ಕೊನೆಗೊಂಡ ನಂತರ ಸೊತ್ತುಕಳವು ಪ್ರಕರಣಗಳು ವರದಿಯಾಗಿದ್ದು, ಇದರ ಕುರಿತು ಸೂಕ್ತ ಕ್ರಮ ಕೈಗೊಳ್ಳುವ ಉದ್ದೇಶದಿಂದ ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಈ ಹಿಂದೆ ವಾಹನ ಕಳವು, ಮನೆಕಳ್ಳತನ, ಸರಕಳ್ಳತನ, ದೇವಸ್ಥಾನ ಕಳವು ದನ ಕಳವು ಇತ್ಯಾದಿ ಪ್ರಕರಣಗಳಲ್ಲಿ ಭಾಗಿಯಾಗಿರುವ ವ್ಯಕ್ತಿಗಳನ್ನು ಈ ದಿನ ನಸುಕಿನ ಜಾವದಲ್ಲಿ ವಶಕ್ಕೆ ಪಡೆದು ಅವರುಗಳು ಸದ್ಯ ಜೀವನೋಪಾಯಕ್ಕಾಗಿ ಯಾವ ವೃತ್ತಿ ಮಾಡುತ್ತಿದ್ದಾರೆ ಇತ್ಯಾದಿ ಮಾಹಿತಿಗ ಬಗ್ಗೆ ವಿಚಾರಿಸಿದ್ದು, ಅವರಿಂದ ಉಪಯುಕ್ತ ಮಾಹಿತಿಯನ್ನು ಪಡೆಯಲಾಗಿದೆ.
ಅವರಿಂದ 179 ಮೊಬೈಲ್ ಫೋನ್, 67 ವಾಹನಗಳನ್ನು ವಶಕ್ಕೆ ಪಡೆದ 120 ಆಸಾಮಿಗಳ ಮೇಲೆ ಕಲಂ: 110 ಸಿ.ಆರ್.ಪಿ.ಸಿ. 97 ಆಸಾಮಿಗಳ ಮೇಲೆ ಕಲಂ: 107 ಸಿಆರ್‌ಪಿ ಹಾಗೂ 35 ಆಸಾಮಿಗಳ ಮೇಲೆ ಕಲಂ: 27(9) ಎನ್.ಡಿ.ಪಿ.ಎಸ್. ಪ್ರಕರಣಗಳಂತೆ ಎಲ್ಲಾ ಎಂ.ಓ. ಆಸಾಮಿಗಳ ಮೇಲೆ ಪ್ರಕರಣ ದಾಖಲಿಸಿ ವಿಚಾರಣೆ ಮುಂದುವರಿಸಲಾಗಿದೆ.