

ಕಲಬುರಗಿ: ಕಾಳನೂರದ ಪುರಾತನ ರತ್ನಿದಾದಿ ದೇವಸ್ಥಾನದಲ್ಲಿ ಏ.೧ರ ರಾತ್ರಿ ನಡೆದ ಕಳವು ಪ್ರಕರಣ ತ್ವರಿತವಾಗಿ ಭೇದಿಸಿ, ತಪ್ಪಿತಸ್ಥರನ್ನು ಬಂಧಿಸಬೇಕು ಎಂದು ಕಾಳನೂರ ಗ್ರಾಮದ ರಾಮ ರಾಠೋಡ ಆಗ್ರಹಿಸಿದರು. ಏ.೧ರ ನಸುಕಿನ ೨ಗಂಟೆಗೆ ನಡೆದ ಕಳವು ಪ್ರಕರಣದಲ್ಲಿ ದೇವಿಗೆ ಹಾಕಿದ್ದ ೧೨ ತೋಲ ಚಿನ್ನಾಭರಣ ಹಾಗೂ ಹುಂಡಿಯಲ್ಲಿದ್ದ ಅಂದಾಜು ೧ ಲP್ಷÀ ಹಣ ಕಳ್ಳತನ ಮಾಡಲಾಗಿದೆ. ಗುಲ್ಬರ್ಗ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆದರೆ ಇದುವರೆಗೆ ಆರೋಪಿಗಳನ್ನು ಪೊಲೀಸರು ಬಂಧಿಸಿಲ್ಲ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಕಳವು ಪ್ರಕರಣದ ಆರೋಪಿಗಳ ಪತ್ತೆ ಜಿ¯್ಲÁ ಉಸ್ತುವಾರಿ ಸಚಿವರಿಗೂ ಮನವಿ ನೀಡಲಾಗಿದೆ. ಕಳ್ಳರ ಬಂಧನಕ್ಕೆ ಆಗ್ರಹಿಸಿ ಏ.೨೨ರಂದು ಸೇಡಂ ಮುಖ್ಯರಸ್ತೆ ಬಂದ್ ಮಾಡಿ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದೆ ಎಂದರು. ಅನಿಲ ರಾಠೋಡ್, ಸುನೀಲ ರಾಠೋಡ್, ಶಶಿಕಾಂತ ರಾಠೋಡ್, ಶಿವರಾಮ ಚವ್ಹಾಣ್, ರಾಜು ರಾಠೋಡ ಇತರರಿದ್ದರು.