

ಹೂವಿನಹಡಗಲಿ: ದೀಪಾವಳಿ ಅಂಗವಾಗಿ ಪಟ್ಟಣದ ಮಾರುಕಟ್ಟೆಯಲ್ಲಿ ಹೂ, ಹಣ್ಣು ಸೇರಿದಂತೆ ವಿವಿಧ ಪೂಜಾ ಸಾಮಗ್ರಿಗಳ ಮಾರಾಟ ಹೆಚ್ಚಾಗಿತ್ತು.
ಅಂಗಡಿ ಹಾಗೂ ಮನೆಗಳಲ್ಲಿ ಲಕ್ಷ್ಮೀ ಪೂಜೆಗಾಗಿ ಪಟ್ಟಣ ಹಾಗೂ ಗ್ರಾಮೀಣ ಪ್ರದೇಶದ ಜನರು ಬಟ್ಟೆ, ಉಡುಪು ಹಾಗೂ ಪೂಜಾ ಸಾಮಗ್ರಿಗಳ ಖರೀದಿಯಲ್ಲಿ ತೊಡಗಿದ್ದರು. ಮಾರುಕಟ್ಟೆಯಲ್ಲಿ ನಾನಾ ರೀತಿಯ ಹಣತೆಗಳು ಕಂಡುಬಂದವು. ಮಣ್ಣಿನ ಹಣತೆ, ಮನೆ ಮತ್ತು ವಾಹನಗಳ ಅಲಂಕಾರಿಕ ವಸ್ತುಗಳು, ಆಕಾಶ ಬುಟ್ಟಿ, ಹಣ್ಣುಗಳು ಹಾಗೂ ಇತರ ವಸ್ತಗಳ ಬೆಲೆ ಕಳೆದ ವರ್ಷಕ್ಕಿಂತ ಹೆಚ್ಚಾಗಿತ್ತು. ಅಂಗಡಿಗಳು ಹಾಗೂ ವಿವಿಧ ಸಂಸ್ಥೆಗಳ ಕಟ್ಟಡಗಳನ್ನು ಹೂ ಹಾಗೂ ವಿದ್ಯುದ್ದೀಪಗಳಿಂದ ಅಲಂಕರಿಸಿ ಲಕ್ಷ್ಮೀ ಮೂರ್ತಿ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಲಾಯಿತು.