‘ಅಸ್ತಮಾ’ ಓಡಿಸಿದ ಅಭಿವೃದ್ಧಿ ಕಾರ್ಯಗಳು

city mla news
ವಿಜಯಪುರ ನಗರ ವಲಯ ವ್ಯಾಪ್ತಿಯ ಅಫ್ಜಲಪುರ ಟಕ್ಕೆಯ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ-49 ರಲ್ಲಿ ನೂತನವಾಗಿ ಅಳವಡಿಸಲಾದ ಸಿಸಿ ಕ್ಯಾಮೆರಾವನ್ನು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಉದ್ಘಾಟಿಸಿದರು. ಮಹಾನಗರ ಪಾಲಿಕೆ ಸದಸ್ಯ ಅಲ್ತ್ಾ ಇಟಗಿ, ತಹಶೀಲ್ದಾರ್ ಕವಿತಾ ಆರ್, ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜ ತಳವಾರ, ಸಿಪಿಐ ರಾಯಗೊಂಡ ಜಾನರ, ಶಿಕ್ಷಣ ಸಂಯೋಜಕ ಎ.ಕೆ.ದಳವಾಯಿ, ಸಿಆರ್‌ಪಿ ಬಸವರಾಜ ಪಡಗಾನೂರ, ನ್ಯಾಯವಾದಿ ಎಸ್.ಎಸ್.ಜಹಾಗಿರದಾರ, ವೀರನಗೌಡ ಪಾಟೀಲ ಇದ್ದರು.
Published on

ವಿಜಯಪುರ: ವಿಜಯಪುರ ನಗರದಿಂದ ಅಸ್ತಮಾ ಹಾಗೂ ದರಿದ್ರತನ ಓಡಿ ಹೋಗಿದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ವಿಜಯಪುರ ನಗರ ವಲಯ ವ್ಯಾಪ್ತಿಯ ಅಫ್ಜಲಪುರ ಟಕ್ಕೆಯ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ-49 ರಲ್ಲಿ ನೂತನವಾಗಿ ಅಳವಡಿಸಲಾದ ಸಿಸಿ ಕ್ಯಾಮೆರಾ ಉದ್ಘಾಟಿಸಿ ಅವರು ಮಾತನಾಡಿದರು.

ನಗರದಲ್ಲಿ ರಸ್ತೆಗಳು ಅಭಿವೃದ್ಧಿಗೊಂಡಿದ್ದರಿಂದ ಸಾರ್ವಜನಿಕರಿಗೆ ತಲೆ ನೋವಾಗಿದ್ದ ಅಸ್ತಮಾ ಓಡಿ ಹೋಗಿದೆ ಎಂದು ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದಾಗ ಸ್ವತ ವೈದ್ಯರೇ ತಿಳಿಸಿದ್ದಾರೆ ಎಂದರು.

ಕಳೆದ ಅವಧಿಯಲ್ಲಿ ಅಫ್ಜಲಪುರ ಟಕ್ಕೆ ಪ್ರದೇಶಕ್ಕೆ ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆಯಡಿ ರೂ.4.25 ಕೋಟಿ ರೂ.ಅನುದಾನದಲ್ಲಿ ಆಂತರಿಕ ರಸ್ತೆ, ಒಳಚರಂಡಿ ಕಾಮಗಾರಿ ಕೈಗೊಳ್ಳಲಾಗಿದೆ. ಲೋಕೋಪಯೋಗಿ ಇಲಾಖೆಯ 1 ಕೋಟಿ ರೂ. ಅನುದಾನದಲ್ಲಿ ಸಿಸಿ ರಸ್ತೆ ಅಭಿವೃದ್ಧಿ ಪ್ರಗತಿಯಲ್ಲಿದೆ. ಹನುಮಾನ ಮತ್ತು ಮಲ್ಲಿಕಾರ್ಜುನ ದೇವಸ್ಥಾನಕ್ಕೆ ತಲಾ 5 ಲಕ್ಷ ರೂ. ಬಸವೇಶ್ವರ ದೇವಸ್ಥಾನಕ್ಕೆ 4.5 ಲಕ್ಷ ರೂ, ಮರಗಮ್ಮ ದೇವಸ್ಥಾನಕ್ಕೆ 22 ಲಕ್ಷ ರೂ. ಡಾ.ಬಿ.ಆರ್.ಅಂಬೇಡ್ಕರ್ ಭವನಕ್ಕೆ 20 ಲಕ್ಷ ರೂ. ಹೀಗೆ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ಮುಂಬೈನ ಸೇಠ ತಪಿದಾಸ ತುಳಸಿದಾಸ ವೈಜದಾಸ ಚಾರಿಟೇಬಲ್ ಟ್ರಸ್ಟ್ ನಿರ್ದೇಶಕ ಸಂದೀಪ ಮೇರಚಾಂತ ಮಾತನಾಡಿದರು. ಎಸ್‌ಡಿಎಂಸಿ ಅಧ್ಯಕ್ಷ ಯೋಗೀಶ ನಡುವಿನಕೇರಿ ಅಧ್ಯಕ್ಷತೆ ವಹಿಸಿದ್ದರು. ಇದೇ ವೇಳೆ ಶಾಲೆಗೆ ದೇಣಿಗೆ ನೀಡಿದ 20ಕ್ಕೂ ಹೆಚ್ಚು ದಾನಿಗಳಿಗೆ ಸನ್ಮಾನಿಸಲಾಯಿತು.

ಮಹಾನಗರ ಪಾಲಿಕೆ ಸದಸ್ಯ ಅಲ್ತ್ಾ ಇಟಗಿ, ತಹಶೀಲ್ದಾರ್ ಕವಿತಾ ಆರ್, ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜ ತಳವಾರ, ಸಿಪಿಐ ರಾಯಗೊಂಡ ಜಾನರ, ಶಿಕ್ಷಣ ಸಂಯೋಜಕ ಎ.ಕೆ.ದಳವಾಯಿ, ಸಿಆರ್‌ಪಿ ಬಸವರಾಜ ಪಡಗಾನೂರ, ನ್ಯಾಯವಾದಿ ಎಸ್.ಎಸ್.ಜಹಾಗಿರದಾರ, ವೀರನಗೌಡ ಪಾಟೀಲ ಇದ್ದರು.
ಮುಖ್ಯೋಪಾಧ್ಯಾಯ ಚಂದ್ರಕಾಂತ ಕನಸೆ ಸ್ವಾಗತಿಸಿದರು. ಶಿಕ್ಷಕಿ ಸವಿತಾ ತಿಗಡಿ ಸ್ವಾಗತ ಗೀತೆ ಹಾಡಿದರು. ಸಿಆರ್ ಪಿ ಜಿ.ಎಂ.ಗುಂಡಳ್ಳಿ ನಿರೂಪಿಸಿದರು. ಶಿಕ್ಷಕ ಮಲ್ಲಯ್ಯ ಸ್ವಾಮಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net