ಕಳೆಗುಂದಿದ ಜಾತ್ರಾ ಸಡಗರ

14MDG3
Published on

ಮುಂಡರಗಿ: ಸ್ಥಳೀಯ ಕೋಟೆಗುಡ್ಡದ ಶ್ರೀ ಲಕ್ಷ್ಮೀ ಕನಕ ನರಸಿಂಹ ದೇವಸ್ಥಾನದ ಜಾತ್ರಾ ಮಹೋತ್ಸವ ನಿಮಿತ್ತ ಶನಿವಾರ ಸಾವಿರಾರು ಭಕ್ತರ ಜಯಘೊಷದ ಮಧ್ಯೆ ಮಹಾರಥೋತ್ಸವ ಸಂಭ್ರಮದಿಂದ ಜರುಗಿತು.

ಜಾತ್ರೆ ಅಂಗವಾಗಿ ದೇವಸ್ಥಾನದಲ್ಲಿ ಬೆಳಗ್ಗೆಯಿಂದ ಸಂಜೆವರೆಗೆ ವಿವಿಧ ಧಾರ್ವಿುಕ ಪೂಜಾ ಕೈಂಕರ್ಯಗಳು ನೆರವೇರಿಸಲಾಯಿತು. ಸಾವಿರಾರು ಭಕ್ತರು ಸರದಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು. ಬೆಳಗ್ಗೆ ಡಾ.ಬಿ.ಆರ್.ಅಂಬೇಡ್ಕರ್ ನಗರದಿಂದ ದಲಿತ ಸಮುದಾಯದ ನೂರಾರು ಭಕ್ತರು ಗರುಡಾರತಿ ಹೊತ್ತು ಮೆರವಣಿಗೆ ಮೂಲಕ ದೇವಸ್ಥಾನಕ್ಕೆ ತೆರಳಿ ಗುರುಡಾರತಿ ಸೇವೆ ಸಲ್ಲಿಸಿದರು.

ಈ ಬಾರಿ ಜಾತ್ರೆಗಿಲ್ಲ ಕಳೆ: ಕರೊನಾ ವೈರಸ್ ತಡೆಗೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದ ಹಿನ್ನೆಲೆಯಲ್ಲಿ ತಾಲೂಕು ಆಡಳಿತವು ಶುಕ್ರವಾರ ರಾತ್ರಿ ಜಾತ್ರೆ ಪ್ರಯುಕ್ತ ಹಾಕಲಾಗಿದ್ದ ಅಂಗಡಿ, ಮುಂಗಟ್ಟುಗಳನ್ನು ತೆರವುಗೊಳಿಸಿದ ಪರಿಣಾಮ ಈ ಬಾರಿ ಜಾತ್ರೆಯ ಕಳೆ ಮರೆಯಾಗಿತ್ತು. ಜನಸಂಖ್ಯೆಯಲ್ಲಿ ಇಳಿಮುಖ ಕಂಡುಬಂತು.

EndFragment

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net