ಕಳಿಸಿದ್ದ ವಾಟ್ಸಾಪ್ ಸಂದೇಶ ಪ್ರಶ್ನಿಸಿದ್ದಕ್ಕೆ ಹಲ್ಲೆ

Upp_Fight
Published on

ನೇಸರಗಿ: ಸಮೀಪದ ಮುರ್ಕಿಬಾವಿ ಗ್ರಾಮದ ಮಹಿಳೆಯೊಬ್ಬರಿಗೆ ವಾಟ್ಸಾಪ್‌ನಲ್ಲಿ ಮೆಸೇಜ್ ಕಳುಹಿಸಿದ್ದನ್ನು ಪ್ರಶ್ನಿಸಿದ್ದಕ್ಕೆ ಮೂವರ ಮೇಲೆ ಹಲ್ಲೆ ನಡೆಸಿದ ಕುರಿತು ನೇಸರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶ್ರೀಧರ ಮುಳಕೂರ, ಸಂಜಯ ನಾಯ್ಕರ, ಶ್ರೀಧರ ರೇವಣ್ಣವರ ಎಂಬುವರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಚೇತನ ಮಾರುತಿ ಶಿಂಧೆ ಹಲ್ಲೆ ಆರೋಪಿ. ಈತ ಮುರ್ಕಿಬಾವಿ ಗ್ರಾಮದ ಮಹಿಳೆಗೆ ವಾಟ್ಸಾಪ್ ಸಂದೇಶ ಕಳುಹಿಸಿದ್ದಾನೆ. ಇದನ್ನು ಶ್ರೀಧರ ಮುಳಕೂರ ಪ್ರಶ್ನಿಸಿದ್ದಾನೆ.

ಇದರಿಂದ ಆರೋಪಿ ಮುರ್ಕಿಭಾವಿ ಗ್ರಾಮಕ್ಕೆ ಹೋಗಿ ಮೂವರ ಮೇಲೆ ಹಲ್ಲೆ ಮಾಡಿ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾಗಿ ದೂರು ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪಿಎಸ್‌ಐ ಐ.ಎಚ್.ರಿತ್ತಿ ತನಿಖೆ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net