

ಅಥಣಿ ಗ್ರಾಮೀಣ: ಅಥಣಿ ತಾಲೂಕಿನ ಕಟಗೇರಿ ಗ್ರಾಮದಲ್ಲಿ ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ಕಳಸಾರೋಹಣ ಹಾಗೂ ಶಿವಲಿಂಗ, ನಂದಿ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಸಮಾರಂಭ ಜು.೨೪ರಿಂದ ಜು.೨೬ರ ವರೆಗೆ ಜರುಗಲಿದೆ.
ಜು.೨೪ರಂದು ಸಂಜೆ ೬ ಗಂಟೆಗೆ ಪ್ರವಚನ, ಸನ್ಮಾನ ಸಮಾರಂಭ ಜರುಗಲಿದ್ದು, ಕೌಲಗುಡ್ಡದ ಅಮರೇಶ್ವರ ಮಹಾರಾಜರು ಸಾನ್ನಿಧ್ಯ ವಹಿಸುವರು. ಮುಖ್ಯ ಅತಿಥಿಯಾಗಿ ಕೃಷ್ಣಾ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಪರಪ್ಪ ಸವದಿ, ಕೆಪಿಸಿಸಿ ಸದಸ್ಯ ಶಾಮರಾವ ಪೂಜಾರಿ, ಶಾಂತಿನಾಥ ನಂದೇಶ್ವರ ಪಾಲ್ಗೊಳ್ಳುವರು. ಜು.೨೫ರಂದು ಬೆಳಗ್ಗೆ ೧೦ ಗಂಟೆಗೆ ಸಂಗೀತ ಸುಧೆ, ಮಧ್ಯಾಹ್ನ ೩ ಗಂಟೆಗೆ ಕಳಸ ಮತ್ತು ನಂದಿ, ಶಿವಲಿಂಗ ಮೂರ್ತಿ ಕುಂಭಾರತಿಯೊಂದಿಗೆ ಬರಮಾಡಿಕೊಳ್ಳಲಾಗುವುದು. ಸಂಜೆ ೬ ಗಂಟೆಗೆ ಪ್ರವಚನ, ಸನ್ಮಾನ ಸಮಾರಂಭ ಜರುಗಲಿದೆ.
ನದಿಇಂಗಳಗಾಂವ ಸಿದ್ಧಲಿಂಗ ಸ್ವಾಮೀಜಿ ಸಾನ್ನಿಧ್ಯ, ಅತಿಥಿಯಾಗಿ ಮಾಜಿ ಶಾಸಕ ಮಹೇಶ ಕುಮಠಳ್ಳಿ, ಸಿದ್ದಪ್ಪ ಮುದಕಣ್ಣವರ, ಧರೆಪ್ಪ ಠಕ್ಕಣ್ಣವರ ಪಾಲ್ಗೊಳ್ಳುವರು.
ಜು.೨೬ರಂದು ಬೆಳಗ್ಗೆ ೪ ಗಂಟೆಗೆ ಶ್ರೀಗಳಿಂದ ಪೂಜೆ, ೯ ಗಂಟೆಗೆ ಶ್ರೀಶೈಲ ಪೀಠದ ಜಗದ್ಗುರು ೧೦೦೮ ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯರರನ್ನು ಅಡ್ಡ ಪಲ್ಲಕ್ಕಿ ಉತ್ಸವದೊಂದಿಗೆ ಬರಮಾಡಿಕೊಳ್ಳಲಾಗುವುದು.
ಬಳಿಕ ನಂದಿ, ಶಿವಲಿಂಗ ಮೂರ್ತಿ ಪ್ರಾಣ ಪ್ರತಿಷ್ಠಾಪನೆ, ೧೦.೫೧ಕ್ಕೆ ಕಳಸಾರೋಹಣ, ಬಳಿಕ ಶ್ರೀಗಳಿಂದ ಆಶೀರ್ವಚನ, ಸನ್ಮಾನ ಜರುಗುವುದು. ಹಿರೇಪಡಸಲಿಗಿಯ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಅಧ್ಯಕ್ಷತೆ ವಹಿಸುವರು. ಗಚ್ಚಿನಮಠದ ಶಿವಬಸವ ಸ್ವಾಮೀಜಿ, ಬಬಲಾದಿಯ ಓಂಕಾರಯ್ಯ ಸ್ವಾಮೀಜಿ, ಶಾಸಕ ಲಕ್ಷ್ಮಣ ಸವದಿ, ಸದಾಶಿವ ಬುಟಾಳಿ ಮುಖ್ಯಅತಿಥಿಗಳಾಗಿ ಭಾಗವಹಿಸುವರು ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.