

ಕಳಸ: ತಾಲೂಕಿನಾದ್ಯಂತ ಮಂಗಳವಾರ ಗಾಳಿ, ಗುಡುಗಿನೊಂದಿಗೆ ಭಾರಿ ಮಳೆಯಾಗಿದ್ದು, ನೆಲ್ಲಿಬೀಡು ಗ್ರಾಮದಲ್ಲಿ ಮನೆ ಮೇಲೆ ಮರ ಬಿದ್ದಿದ್ದರಿಂದ ಛಾವಣಿ ಜಖಂಗೊಂಡಿದೆ.
ಗಾಳಿಯಿಂದಾಗಿ ನೆಲ್ಲಿಬೀಡು ತೂಗುಸೇತುವೆ ಬಳಿ ಅಜ್ಜಿಗದ್ದೆ ಪ್ರೇಮಾ ಎಂಬುವವರ ಮನೆ ಮೇಲೆ ಮರ ಬಿದ್ದು ಮನೆ ಜಖಂಗೊಂಡಿದೆ. ಕಳಸ-ಶೃಂಗೇರಿ ರಸ್ತೆಯ ಗೊರಸುಗುಡಿಗೆ ಎಂಬಲ್ಲಿ ರಸ್ತೆಗೆ ಮರ ಬಿದ್ದ ಪರಿಣಾಮ ಕೆಲಕಾಲ ರಸ್ತೆ ಸಂಪರ್ಕ ಅಸ್ತ್ಯವ್ಯಸ್ತಗೊಂಡಿತ್ತು.