

ಮಂಗಳೂರು: ಅಡ್ಡೂರು ಶ್ರೀ ಮುಖ್ಯಪ್ರಾಣ ದೇವಸ್ಥಾನ ಬ್ರಹ್ಮಕಲಶೋತ್ಸವದ ಅಂಗವಾಗಿ ಕಳಸಗುರಿ ನವಜ್ಯೋತಿ ್ರೆಂಡ್ಸ್ ಕ್ಲಬ್ ವತಿಯಿಂದ ಅದ್ದೂರಿ ಸಂಗೀತ ಸಂಭ್ರಮ ಜರುಗಿತು.
ರಾಜಶ್ರೀ ಕುಡ್ಲ ಅವರಿಂದ ಹಾಸ್ಯಮಯ ನಾಟಕ, ಬಜಪೆ ನೃತ್ಯ ತಂಡದಿಂದ ನೃತ್ಯಪ್ರದರ್ಶನ ಹಾಗೂ ಜಿಲ್ಲೆಯ ಜನಪ್ರಿಯ ಗಾಯಕರಿಂದ ಗಾಯನ ನಡೆಯಿತು. ನವಜ್ಯೋತಿ ಸಹಾಯ ನಿಧಿ ಯೋಜನೆಯ ಮುಂದುವರಿದ ಭಾಗವಾಗಿ ಪೊಳಲಿ ನಿವಾಸಿ ಹರೀಶ್ ದಂಪತಿ ಪುತ್ರ ವಿಭಾಷ್‌ಗೆ ವೈದ್ಯಕೀಯ ಚಿಕಿತ್ಸಾ ವೆಚ್ಚವಾಗಿ 10 ಸಾವಿರ ರೂ. ಹಾಗೂ ಗುರುಪುರ ನಿವಾಸಿ ಕಸ್ತೂರಿ ಅವರಿಗೆ ಚಿಕಿತ್ಸಾ ವೆಚ್ಚ 10 ಸಾವಿರ ರೂ ಹಾಗೂ ದ್ವಿತೀಯ ಪಿಯುಸಿಯಲ್ಲಿ ಅತ್ಯಧಿಕ ಶ್ರೇಣಿಯಲ್ಲಿ ತೇರ್ಗಡೆಗೊಂಡ ಐದು ಜನ ವಿದ್ಯಾರ್ಥಿಗಳಿಗೆ ತಲಾ 2,500 ರೂ. ಪ್ರೋತ್ಸಾಹಧನ ವಿತರಿಸಲಾಯಿತು.
ಸಂಸ್ಥೆಯ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ ಕೋಡಿಬೆಟ್ಟು, ಗೌರವ ಸಲಹೆಗಾರರಾದ ಪದ್ಮನಾಭ ಹೆಗ್ಡೆ ಕೋಡಿಬೆಟ್ಟು, ಲೋಕನಾಥ ಪೊನ್ನೆಲ, ಭೋಜ ಕುಲಾಲ್ ಪಲ್ಲನೆಲ, ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಧನಂಜಯ ಗಂದಾಡಿ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ನೂಯಿ ರವಿಶಂಕರ್ ರಾವ್ ಉಪಸ್ಥಿತರಿದ್ದರು.
ಜಿತೇಶ್ ಕುಮಾರ್ ಉಳಿಯ, ಕಿರಣ್ ಉಳಿಯ ಹಾಗೂ ಕಿರಣ್ ಪೂಜಾರಿ ಕಾರ್ಯಕ್ರಮ ನಿರ್ವಹಿಸಿದರು.