ಕಳಸಕ್ಕೆ ರೋಟರಿಯಿಂದ ಶಾಶ್ವತ ಕೊಡುಗೆ

kls rotr
ಕಳಸದಲ್ಲಿ ಕಾರಕ್ಕಿ ಗೋವಿಂದ ಗೌಡ, ಕೆ.ಪಿ.ಪೂಜಿತ್ ಅವರನ್ನು ಸನ್ಮಾನಿಸಲಾಯಿತು. ಯು.ಎಸ್.ಕಾವ್ಯಾ, ಟಿ.ವಿ.ವೆಂಕಟಸುಬ್ಬಯ್ಯ, ಪಿ.ಎ.ಕುಮಾರಸ್ವಾಮಿ, ರಾಜಗೋಪಾಲ ಜೋಷಿ ಇತರರಿದ್ದರು.
Published on

ಕಳಸ: ಕಳಸ ರೋಟರಿ ಕ್ಲಬ್ ರಜತ ಮಹೋತ್ಸವ ಅಂಗವಾಗಿ ಕಲಶೇಶ್ವರ ದೇವಸ್ಥಾನದ ಈಶ್ವರ ಕಲಾ ಮಂದಿರಕ್ಕೆ ಛಾವಣಿ ನಿರ್ಮಿಸಿಕೊಡಲಾಯಿತು.

ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನದ ಧರ್ಮಕರ್ತ ಜಿ.ಭೀಮೇಶ್ವರ ಜೋಷಿ ಅವರು ಛಾವಣಿ ಉದ್ಘಾಟಿಸಿ ಮಾತನಾಡಿ, ಕಳಸ ರೋಟರಿ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸಿದ ಪ್ರತಿ ಅಧ್ಯಕ್ಷರೂ ಸೇವೆಯೇ ಧ್ಯೇಯ ಎಂಬಂತೆ ಕರ್ತವ್ಯ ನಿರ್ವಹಿಸಿ ಕಳಸಕ್ಕೆ ಶಾಶ್ವತ ಕೊಡುಗೆಗಳನ್ನು ನೀಡುತ್ತ ಬಂದಿದ್ದಾರೆ. ರಜತ ಮಹೋತ್ಸವ ಸಂದರ್ಭದಲ್ಲಿ ಕಳಸದ ಈಶ್ವರ ಮಂದಿರಕ್ಕೆ ಮೇಲ್ಛಾವಣಿ ನಿರ್ಮಿಸಿರುವುದು ದೊಡ್ಡ ಕೊಡುಗೆಯಾಗಿದೆ ಎಂದು ಹೇಳಿದರು.

ಕಳಸ ತಹಸೀಲ್ದಾರ್ ಯು.ಎಸ್.ಕಾವ್ಯಾ ಮಾತನಾಡಿ, ರಾಜಕಾರಣಿಗಳು, ಅಧಿಕಾರಿಗಳು, ಮುಖಂಡರು ಮಾಡಲಾಗದ ಕೆಲಸವನ್ನು ರೋಟರಿಯಂಥ ಸಂಸ್ಥೆಗಳು ಮಾಡುತ್ತಿವೆ ಎಂದು ಹೇಳಿದರು.

ನಾಟಿ ವೈದ್ಯ ಕಾರಕ್ಕಿ ಗೋವಿಂದ ಗೌಡ ಹಾಗೂ ಜೆಇಇ ಮೆನ್ಸ್ ಪರೀಕ್ಷೆಯಲ್ಲಿ ದೇಶಕ್ಕೆ 34ನೇ ಸ್ಥಾನ ಪಡೆದ ಕೆ.ಪಿ.ಪೂಜಿತ್ ಇವರನ್ನು ಗೌರವಿಸಲಾಯಿತು. ಜಾಂಬ್ಲೆ ಸರ್ಕಾರಿ ಶಾಲೆಗೆ ಟಿವಿ ನೀಡಲಾಯಿತು.

ಕಲಶೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಟಿ.ವಿ.ವೆಂಕಟಸುಬ್ಬಯ್ಯ, ರೋಟರಿ ಕಾರ್ಯದರ್ಶಿ ಪಿ.ಎ.ಕುಮಾರಸ್ವಾಮಿ, ರಾಜಗೋಪಾಲ ಜೋಷಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net