ಕಳಸ ಪಿಎಸಿಎಸ್‌ಗೆ ಜಿ.ಕೆ.ಮಂಜಪ್ಪಯ್ಯ ಅಧ್ಯಕ್ಷ

kls pacs
ಕಳಸ ಪಿಎಸಿಎಸ್ ಅಧ್ಯಕ್ಷ ಜಿ.ಕೆ.ಮಂಜಪ್ಪಯ್ಯ ಹಾಗೂ ಉಪಾಧ್ಯಕ್ಷೆ ಆಶಾಲತಾ ಡಿ. ಜೈನ್ ಅವರನ್ನು ನಿರ್ದೇಶಕರು ಅಭಿನಂದಿಸಿದರು. ನಿಲ್ ಗೇವಿನ್ ಡಿಸೋಜಾ, ನಾರಾಯಣ, ಕೆ.ಸಿ.ಮಹೇಶ್, ಕೆ.ಎಚ್.ದೇಜಪ್ಪ ಇತರರಿದ್ದರು.
Published on

ಕಳಸ: ಕಳಸ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಸತತ ಆರನೇ ಬಾರಿಗೆ ಜಿ.ಕೆ.ಮಂಜಪ್ಪಯ್ಯ ಹಾಗೂ ಉಪಾಧ್ಯಕ್ಷರಾಗಿ ಆಶಾಲತಾ ಡಿ. ಜೈನ್ ಅವಿರೋಧವಾಗಿ ಆಯ್ಕೆಯಾದರು.

ಡಿ.22ರಂದು ಅವಿರೋಧವಾಗಿ ನಿರ್ದೇಶಕರ ಆಯ್ಕೆಯಾಗಿತ್ತು. ಗುರುವಾರ ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.

ನಂತರ ನಡೆದ ಅಭಿನಂದನಾ ಸಭೆಯಲ್ಲಿ ಮಾತನಾಡಿದ ಅಧ್ಯಕ್ಷ ಜಿ.ಕೆ.ಮಂಜಪ್ಪಯ್ಯ, ಸಂಘದ ಸದಸ್ಯರನ್ನು ಗೌರವದಿಂದ ನೋಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ. ಸಿಬ್ಬಂದಿಯನ್ನು ವಿಶ್ವಾಸಕ್ಕೆ ತೆಗೆದುಕೊಂಡಾಗ ಮಾತ್ರ ಸಂಘ ಇನ್ನೂ ಎತ್ತರಕ್ಕೆ ಬೆಳೆಯಲು ಸಾಧ್ಯ. ನಿರ್ದೇಶಕರು ಸರ್ಕಾರಿ ನಿಯಮಗಳನ್ನು ಪಾಲಿಸಿಕೊಂಡು ಸಂಘಕ್ಕೆ ಯಾವುದೇ ಕಪ್ಪು ಚುಕ್ಕೆ ಆಗದಂತೆ ನೋಡಿಕೊಳ್ಳಬೇಕು ಎಂದರು.

ನಿರ್ದೇಶಕರಾದ ಅನಿಲ್ ಗೇವಿನ್ ಡಿಸೋಜಾ, ನಾರಾಯಣ ಎನ್.ಸಿ. ನೂಜಿ, ಎಚ್.ಆರ್.ಜಗದೀಶ್ ಗೌಡ, ಕೆ.ಸಿ.ಮಹೇಶ್, ಕೆ.ಎಚ್.ದೇಜಪ್ಪ, ಮಧುವನ ಜೈನ್, ರತಿ ರವೀಂದ್ರ, ಕೆ.ಎಸ್.ಕೃಷ್ಣಪ್ಪ, ಟಿ.ವಿ.ಗಾಯತ್ರಿ, ಕೆ.ರಾಜೇಂದ್ರ, ಚುನಾವಣಾ ಅಧಿಕಾರಿ ಜ್ಯೋತಿಲಕ್ಷ್ಮೀ, ಸಂಘದ ಸಿಇಒ ಮಹಬಲೇಶ್ವರ ಭಟ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net