

ಚಿತ್ರದುರ್ಗ: ಬುರುಜನಹಟ್ಟಿ ತಗ್ಗಿನ ಆಂಜನೇಯಸ್ವಾಮಿ ಸನ್ನಿಧಿಯಲ್ಲಿ ನ. 29, 30ರಂದು ಸಂಕಷ್ಟಹರ ಗಣಪತಿ ಮತ್ತು ನವಗ್ರಹ ದೇವರ ನೂತನ ಗೋಪುರದ ಕಳಶ ಪ್ರತಿಷ್ಠಾಪನಾ, ಮಹಾದ್ವಾರ ಪೂಜೆ ಹಾಗೂ ಆಂಜನೇಯಸ್ವಾಮಿ ಕಾರ್ತಿಕ ಮಹೋತ್ಸವ ಹಮ್ಮಿಕೊಳ್ಳಲಾಗಿದೆ.
29ರ ಬೆಳಗ್ಗೆ 7.30ಕ್ಕೆ ಗಂಗಾ ಪೂಜೆಯೊಂದಿಗೆ ಮಹಾದ್ವಾರ ಪ್ರವೇಶ, ಮಹಾಮಂಗಳಾರತಿ. ಸಂಜೆ 6ಕ್ಕೆ ವಾಸುದೇವ ಪುಣ್ಯಾಹವಾಚನ, ಪಂಚಗವ್ಯ ಸ್ಥಾಪನೆ, ಯಾಗಶಾಲಾ ಪ್ರವೇಶ, ದ್ವಾರರಾಧನೆ, ಅಗ್ನಿಪ್ರತಿಷ್ಠೆ, ಗಣಹೋಮ ನೆರವೇರಲಿದೆ.
30ರ ಬೆಳಗ್ಗೆ 5ರಿಂದ 6ರವರೆಗೆ ಸಲ್ಲುವ ಬ್ರಾಹ್ಮೀ ಮುಹೂರ್ತದಲ್ಲಿ ಪ್ರತಿಷ್ಠಾಂಗ, ನವಗ್ರಹ ಹೋಮ, ನೂತನ ಗೋಪುರ ಕಲಶ ಪ್ರತಿಷ್ಠಾಪನಾ ಕಾರ್ಯಕ್ರಮ, ಕುಂಭಾಭಿಷೇಕ, ನಂತರ ಪಂಚಾಮೃತ ಅಭಿಷೇಕ, ಅಲಂಕಾರ ಮಹಾನೆವೇದ್ಯ, ರಂಗಪೂಜೆ ಹಾಗೂ ಗೋದರ್ಶನ ನಡೆಯಲಿದೆ.
ಮಧ್ಯಾಹ್ನ 12ಕ್ಕೆ ಮಹಾ ಅನ್ನಸಂತರ್ಪಣೆ, ಸಂಜೆ 6ಕ್ಕೆ ಮಹಾಗಣಪತಿ, ಆಂಜನೇಯಸ್ವಾಮಿಯ ಕಾರ್ತಿಕ ಮಹೋತ್ಸವ ಜರುಗಲಿದೆ ಎಂದು ಅರ್ಚಕರಾದ ಸಿ.ಆರ್.ಕೃಷ್ಣಪ್ಪ, ಸಿ.ಆರ್.ಕಿರಣ್, ಸಿ.ಆರ್.ಪ್ರಕಾಶ್ ತಿಳಿಸಿದ್ದಾರೆ.