ಕಳವು ಆರೋಪಿಗಳ ಬಂಧನ

21 mlv 2
ಮಳವಳ್ಳಿ ತಾಲೂಕಿನ ನೆಟ್ಕಲ್ ಗ್ರಾಮದಲ್ಲಿ ಕಳುವು ಮಾಡಲಾಗಿದ್ದ ವಸ್ತುಗಳನ್ನು ಬೆಳಕವಾಡಿ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪಿಎಸ್‌ಐ ಅಶೋಕ್, ಸಿಬ್ಬಂದಿ ಶಿವಕುಮಾರ್, ರಿಯಾಜ್‌ಪಾಷ, ನಿಂಗರಾಜು, ಅವಿನಾಶ, ಜಯಕುಮಾರ್, ನಾಗೇಂದ್ರ ಇದ್ದರು.
Published on

ಮಳವಳ್ಳಿ: ತಾಲೂಕಿನ ನೆಟ್ಕಲ್ ಗ್ರಾಮದ ಪಶು ಚಿಕಿತ್ಸಾ ಕೇಂದ್ರದಲ್ಲಿ ಇತ್ತೀಚೆಗೆ ಕಳ್ಳತನ ಮಾಡಿದ್ದ ಮೂವರು ಆರೋಪಿಗಳನ್ನು ಬೆಳಕವಾಡಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಪಟ್ಟಣದ ಗಿರೀಶ್, ಮನ್ಸೂರ್, ನೆಟ್ಕಲ್ ಗ್ರಾಮದ ಮನೋಜಪಟೇಲ್ ಬಂಧಿತರು. ಅ.19ರ ರಾತ್ರಿ ಚಿಕಿತ್ಸಾ ಕೇಂದ್ರದ ಬೀಗ ಒಡೆದು ಯಂತ್ರೋಪಕರಣಗಳನ್ನು ಕಳವು ಮಾಡಿದ್ದರು. ಈ ಸಂಬಂಧ ಪಶು ವೈದ್ಯಾಧಿಕಾರಿ ಡಾ.ನವೀನ್‌ಕುಮಾರ್ ದೂರು ದಾಖಲಿಸಿದ್ದರು.

ಬೈಕ್‌ನಲ್ಲಿ ವೇಗವಾಗಿ ಚಾಲನೆ ಮಾಡಿಕೊಂಡು ಹೋಗುತ್ತಿದ್ದ ವೇಳೆ ಮೂವರನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸಿದಾಗ ಕಳವು ಪ್ರಕರಣ ಬಳಕಿಗೆ ಬಂದಿದೆ ಎನ್ನಲಾಗಿದೆ. ಬಂಧಿತರಿಂದ ಒಂದು ಬೈಕ್, ಕಳುವು ಮಾಡಲಾಗಿದ್ದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದ್ದು, ಅವರನ್ನು ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ. ಪ್ರಕರಣವನ್ನು ಭೇದಿಸುವಲ್ಲಿ ಪಿಎಸ್‌ಐ ಅಶೋಕ್, ಸಿಬ್ಬಂದಿ ಶಿವಕುಮಾರ್, ರಿಯಾಜ್‌ಪಾಷ, ನಿಂಗರಾಜು, ಅವಿನಾಶ, ಜಯಕುಮಾರ್, ನಾಗೇಂದ್ರ ಭಾಗಿಯಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net