ಕಳವು ಆರೋಪಿ ಬಂಧನ

AREST
Published on

ಚಿತ್ರದುರ್ಗ: ಬೀಗ ಹಾಕಿದ್ದ ಮನೆಗಳನ್ನು ಟಾರ್ಗೆಟ್ ಮಾಡಿಕೊಂಡು ಬೆಲೆ ಬಾಳುವ ವಸ್ತ, ನಗದು ಕಳವು ಮಾಡುತ್ತಿದ್ದ ಆರೋಪಿಯ ನ್ನು ಹೊಳಲ್ಕೆರೆ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿ ಹೊಸದುರ್ಗದ ಸೈಯದ್ ಫಜಲ್ (27), ಹೊಳಲ್ಕೆರೆ ಸಿದ್ದರಾಮಪ್ಪ ಬಡಾವಣೆ ಮನೆ ಹಾಗೂ ಚಿಕ್ಕಜಾಜೂರಲ್ಲಿ ಮನೆಯೊಂದರ ಬೀಗ ಒಡೆದು, ಅಂದಾಜು 1.25 ಲಕ್ಷ ರೂ.ನಗ, ನಗದು ಕಳವು ಮಾಡಿ ಪರಾರಿಯಾಗಿದ್ದ. ಈ ಕೃತ್ಯ ಭೇದಿಸಿದ ಸಿಪಿಐ ಎಂ. ಬಿ.ಚಿಕ್ಕಣ್ಣವರ್, ಪಿಎಸ್‌ಐ ಸಚಿನ್ ಪಟೇಲ್ ಮತ್ತವರ ಸಿಬ್ಬಂದಿ ಆರೋಪಿಯನ್ನು ಬಂಧಿಸಿದ್ದಾರೆ. ಹೊಳಲ್ಕೆರೆ ಮನೆಯೊಂದರಲ್ಲಿ 16 ಗ್ರಾಂ ಬಂಗಾರದ ಒಡವೆ, 80 ಬೆಳ್ಳಿ ವಸ್ತುಗಳು 4.500 ರೂ.ನಗದು ಹಾಗೂ ಚಿಕ್ಕಜಾಜೂರಿನ ಮನೆಯಲ್ಲಿ 8 ಸಾವಿರ ರೂ.ನಗದು ಕದ್ದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net