ಕಳವಾಗಿದ್ದ 5 ಕ್ವಿಂಟಲ್ ಅಕ್ಕಿ ವಶ

rice
Published on

ಚಿತ್ರದುರ್ಗ: ನಗರದ ಕೆಳಗೋಟೆಯ ನ್ಯಾಯಬೆಲೆ ಅಂಗಡಿಯೊಂದರಲ್ಲಿ 50 ಕೆ.ಜಿ ತೂಕದ 10 ಪ್ಯಾಕೆಟ್ (5 ಕ್ವಿಂಟಲ್) ಅಕ್ಕಿ ಕಳವಾಗಿತ್ತು. ಬುಧವಾರ ವಾಹನದಲ್ಲಿ ಸಾಗಿಸುವ ವೇಳೆ ಅನುಮಾನ ವ್ಯಕ್ತವಾದ ಹಿನ್ನೆಲೆಯಲ್ಲಿ ತಪಾಸಣೆ ನಡೆಸಲಾಗಿದ್ದು, ಆರೋಪಿತರಿಂದ ಅಕ್ಕಿ ವಶಪಡಿಸಿಕೊಳ್ಳಲಾಗಿದೆ. ಆಹಾರ ಇಲಾಖೆ ಅಧಿಕಾರಿಗಳು ಕೂಡ ಪರಿಶೀಲನೆ ನಡೆಸಿದ್ದು, ಇಲಾಖೆಗೆ ಸಂಬಂಧಿಸಿದ್ದು ಎಂದು ಖಚಿತಪಡಿಸಿದ್ದಾರೆ. ಈ ಕುರಿತು ಬಡಾವಣೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net