ಕಳಪೆ ಸಾಮಗ್ರಿ ಕ್ರಮಕ್ಕೆ ಆಗ್ರಹ

Bhanvarsing Meena
Published on

ಕಲಬುರಗಿ: ಜಿ¯್ಲÉಯಲ್ಲಿ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಕಳಪೆ ಹನಿ ನೀರಾವರಿ ಸಾಮಗ್ರಿ ನೀಡಿ ರೈತರಿಗೆ ಮೋಸ ಮಾಡಿದ್ದು, ಅಧಿಕಾರಿಗಳನ್ನು ಅಮಾನತು ಮಾಡಬೇಕು ಎಂದು ಆಗ್ರಹಿಸಿ ಜಯ ಕರ್ನಾಟಕ ಜನಪರ ವೇದಿಕೆಯಿಂದ ಜಿಲ್ಲಾ ಪಂಚಾಯಿತಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಲಾಯಿತು.

ಸಂಬAಧಿಸಿದ ಅಧಿಕಾರಿಗಳು ರೈತರ ಜಮೀನಿನಲ್ಲಿ ಕಡಿಮೆ ಹನಿ ನೀರಾವರಿ ಸಾಮಗ್ರಿ ಆಳವಡಿಸಿ, ಹೆಚ್ಚಿನ ಅನುದಾನವನ್ನು ಪಡೆದಿದ್ದಾರೆ. ರೈತರು ಮತ್ತು ಸರ್ಕಾರಕ್ಕೆ ಅಧಿಕಾರಿಗಳು, ಕಂಪನಿಗಳು ಕೂಡಿ ಮೋಸ ಮಾಡಿದ್ದು, ಅಂತಹ ಕಂಪನಿಗಳ ಪರವಾನಗಿ ಕಪ್ಪು ಪಟ್ಟಿಗೆ ಸೇರಿಸಬೇಕು ಎಂದು ಒತ್ತಾಯಿಸಿದರು.

ಗುಣಮಟ್ಟದ ಐಎಸ್‌ಐ ಮಾರ್ಕ್ ಇರುವ ಸಾಮಗ್ರಿ ಅಳವಡಿಸಬೇಕು, ಹೆಚ್ಚಿನ ವಂತಿಗೆ ಹಣ ಪಡೆದಿದ್ದು, ಅದನ್ನು ರೈತರಿಗೆ ಮರಳಿ ನೀಡಬೇಕು, ಸರ್ಕಾರದ ಅನುದಾನ ದುರ್ಬಳಕೆ ಮಾಡಿದ ಭ್ರಷ್ಟ ಅಧಿಕಾರಿಗಳನ್ನು ಅಮಾನತು ಮಾಡಬೇಕು ಎಂದು ಮನವಿ ಮಾಡಿದರು.

ಜಯ ಕರ್ನಾಟಕ ಜನಪರ ವೇದಿಕೆ ಜಿಲ್ಲಾಧ್ಯಕ್ಷ ಬಸವರಾಜ ಕೋರಳ್ಳಿ, ಸದಾಶಿವ ಕ್ಷೇತ್ರಿ, ಮುತ್ತು, ದಯಾನಂದ ಪಾಟೀಲ್, ರಾಹುಲ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net