ಕಳಪೆ ಕಾಮಗಾರಿಗೆ ನೀವೇ ಹೊಣೆ

13 07
Published on

ಅಧಿಕಾರಿಗಳಿಗೆ ಗೃಹಸಚಿವ ಡಾ.ಜಿ.ಪರಮೇಶ್ವರ ಎಚ್ಚರಿಕೆ

ಪಾವಗಡ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಹು ನಿರೀಕ್ಷಿತ ಶುದ್ಧ ಕುಡಿಯುವ ನೀರಿನ ಉದ್ಘಾಟನೆ ಹಾಗೂ ತಾಲೂಕಿನ ಹಲವಾರು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲು ಜು.21ರಂದು ಆಗಮಿಸಲಿದ್ದು, ಕಳಪೆ ಕಾಮಗಾರಿಯಿಂದ ಸಮಸ್ಯೆ ಆದರೆ ಅಧಿಕಾರಿಗಳೆ ನೇರ ಹೊಣೆ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ ತಿಳಿಸಿದರು.

ತಾಲೂಕು ಪಂಚಾಯಿತಿಯ ಸಭಾಂಗಣದಲ್ಲಿ ಶನಿವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಮಾತನಾಡಿ, ತುಂಗಭದ್ರ ಕುಡಿಯುವ ನೀರು ಬಹುನಿರಿಕ್ಷತ ಯೋಜನೆಯಾಗಿದ್ದು, ಇದೊಂದು ಐತಿಹಾಸಿಕ ಕಾರ್ಯಕ್ರಮಗಳಾಗಿದ್ದು, ಲೋಪವಾಗದಂತೆ ಯಶಸ್ವಿಯಾಗಿ ನಡೆಸುವ ನಿಟ್ಟಿನಲ್ಲಿ ಪೂರ್ವ ಸಿದ್ಧತೆಗಳನ್ನು ಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು. ತಾಲೂಕಿನ ಪ್ರತಿಯೊಂದು ಗ್ರಾಮದ ಎಲ್ಲ ಮನೆಗಳಿಗೂ ತುಂಗಭದ್ರಾ ಶುದ್ಧ ಕುಡಿಯುವ ನೀರು ಸಿಗುವಂತಾಗಬೇಕು. 2356 ಕೋಟಿ ವೆಚ್ಚದ ತುಂಗಭ್ರದ್ರಾ ಕುಡಿಯುವ ನೀರಿನ ಯೋಜನೆ ಯೋಜನೆ ಇದಾಗಿದ್ದು, ಗುಣಮಟ್ಟದಿಂದ ಕೂಡಿರಬೇಕು. ಒಂದು ವೇಳೆ ಕಳಪೆ ಕಾಮಗಾರಿಯಿಂದ ಸಮಸ್ಯೆ ಆದರೆ ಅಧಿಕಾರಿಗಳೆ ಹೊಣೆ ಈ ಯೋಜನೆಯಿಂದ ತಾಲೂಕಿನ ಚಿತ್ರಣವೇ ಬದಲಾಗಬೇಕು.

ವಿಶ್ವದಲ್ಲಿಯೇ ಪಾವಗಡ ತಾಲೂಕು ಸೊಲಾರ್​ ಪಾರ್ಕ ನಿಮಾರ್ಣದಲ್ಲಿ ಮೊದಲನೇ ಸ್ಥಾನ ಪಡೆದುಕೊಳ್ಳುತ್ತಿದ್ದು, ಸರ್ಕಾರ ಮತ್ತು ಖಾಸಗಿವರಿಂದ 3050 ಮೆಗಾವಾಟ್​ ವಿದ್ಯತ್​ ಉತ್ಪಾದನೆ ಮಾಡಬಹುದಾಗಿದೆ. ಶಂಕುಸ್ಥಾಪನೆಗೆ ಕೆಪಿಸಿಎಲ್​ ಹಾಗೂ ಕೆಎಸ್​ಪಿಡಿಸಿಎಲ್​ಯಿಂದ ಮುಂದಿನ ದಿನಗಳಲ್ಲಿ 15 ಕೋಟಿ ವೆಚ್ಚದಲ್ಲಿ ಸೋಲಾರ್​ ವಿದ್ಯುತ್​ ಉತ್ಪಾದನೆಗೆ ಚಾಲನೆ ನೀಡುತ್ತಿದ್ದು, ಇದರಿಂದ ವಿಶ್ವವೇ ಪಾವಗಡ ತಾಲೂಕಿನತ್ತ ತಿರುಗಿ ನೋಡುವಂತಾಗಿದೆ ಎಂದರು. ಈ ಕಾರ್ಯಕ್ರಮದಲ್ಲಿ 490 ಕಾಮಗಾರಿಗಳ ಉದ್ಘಾಟನೆ,193.ಕೋಟಿಯ ವಿವಿಧ ಇಲಾಖೆಗಳ ಕಾಮಗಾರಿ ಹಾಗೂ ಮೈನಾರಿಟಿ ವಸತಿ ಶಾಲೆ ಮತ್ತು ಕಾರ್ಮಿಕ ಶಾಲೆಗೆ ಶಂಕು ಸ್ಥಾಪನೆ ಹಾಗೂ ಹಲವಾರು ಫಲಾನುಭವಿಗಳಿಗೆ ಸರ್ಕಾರದ ಸವಲತ್ತುಗಳನ್ನು ನೀಡಲಾಗುವುದು.

ವಿದ್ಯಾರ್ಥಿಗಳ ಅನುಕೂಲಕ್ಕಾಗಿ ವಸತಿ ನಿಲಯಗಳನ್ನು ಮತ್ತು ತುಮುಲ್​ನಲ್ಲಿ ನೂರಾರು ಕೋಟಿ ಆದಾಯ ಇರುವುದರಿಂದ ಪಾವಗಡದಲ್ಲಿ ರೈತಭವನ, ಸಮುದಾಯಭವನ, ವಿದ್ಯಾರ್ಥಿನಿಲಯ, ಯಾವುದಾದರೂ ಒಂದನ್ನು 10 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸುವಂತೆ ತುಮುಲ್​ ಅಧ್ಯಕ್ಷರಿಗೆ ಸೂಚಿಸಿದರು.

ನಂತರ ಕಾರ್ಯಕ್ರಮ ನಡೆಯುವ ಜೂನಿಯರ್​ ಕಾಲೇಜು ಕ್ರೀಡಾಂಗಣಕ್ಕೆ ಭೇಟಿ ನೀಡಿದ ಗೃಹ ಸಚಿವರು ಹಾಗೂ ಶಾಸಕರು ಸ್ಥಳ ಪರಿಶೀಲನೆ ನಡೆಸಿದರು.

ಶ್ರೀ ಶನಿಮಹಾತ್ಮದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಮಧುಗಿರಿ ಎ.ಸಿ.ಗೋಟೂರು ಶಿವಪ್ಪ, ಡಿ.ಎನ್​. ವರದರಾಜು, ಇಒ ಜಾನಕಿರಾಮ್​ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net