ಕಳಪೆ ಕಾಮಗಾರಿ ವಿರುದ್ಧ ಪ್ರತಿಭಟನೆ

31 gkp 04
ಬಿಳುಗುಂದ-ಆನಂದಪುರ ರಸ್ತೆ ಕಾಮಗಾರಿ ಕಳಪೆ ಎಂದು ಆರೋಪಿಸಿ ಅಮ್ಮತ್ತಿ ರೈತ ಸಂಘ ಮತ್ತು ಸ್ಥಳಿಯರು ಪ್ರತಿಭಟನೆ ನಡೆಸಿದರು.
Published on

ಗೋಣಿಕೊಪ್ಪ: ಬಿಳುಗುಂದ-ಆನಂದಪುರ ರಸ್ತೆ ಕಾಮಗಾರಿ ಕಳಪೆಯಾಗಿದೆ ಎಂದು ಆರೋಪಿಸಿ ಅಮ್ಮತ್ತಿ ರೈತ ಸಂಘ ಮತ್ತು ಸ್ಥಳೀಯರು ಶನಿವಾರ ಪ್ರತಿಭಟನೆ ನಡೆಸಿದರು.

ಶುಕ್ರವಾರದವರೆಗೂ ನಡೆದ ಕಳಪೆ ಕಾಮಗಾರಿಯಿಂದಾಗಿ ಡಾಂಬರ್ ಕಿತ್ತು ಬರುತ್ತಿದೆ. ಮಣ್ಣಿನ ಮೇಲೆ ಡಾಂಬರ್ ಹಾಕಲಾಗುತ್ತಿದ್ದು, ಗುಣಮಟ್ಟದ ಡಾಂಬರ್ ಬಳಕೆ ಮಾಡುತ್ತಿಲ್ಲ ಎಂದು ಆರೋಪಿಸಿ ಸ್ಥಳೀಯರು ಕಾಮಗಾರಿಗೆ ತಡೆ ಮಾಡಿದರು. ಇದಕ್ಕೆ ಮಣಿದ ಲೋಕೋಪಯೋಗಿ ಇಲಾಖೆ ಇಂಜಿನಿಯರ್ ನಾಗರಾಜ ಪಾಟೀಲ್, ಗುಣಮಟ್ಟದ ಕಾಮಗಾರಿ ನಡೆಸುವುದಾಗಿ ಭರವಸೆ ನೀಡಿದ ಹಿನ್ನೆಲೆಯಲ್ಲಿ ಕಾಮಗಾರಿ ನಡೆಸಲು ಅವಕಾಶ ನೀಡಲಾಯಿತು.

ಅಮ್ಮತ್ತಿ ರೈತ ಸಂಘದ ಅಧ್ಯಕ್ಷ ಕೇಚಂಡ ಪ್ರಸನ್ನ, ಗೌರವಾಧ್ಯಕ್ಷ ಕಾವಡಿಚಂಡ ಗಣಪತಿ, ಉಪಾಧ್ಯಕ್ಷ ಮಚಿಮಂಡ ಜಯ ಉತ್ತಪ್ಪ, ಜಂಟಿ ಕಾರ್ಯದರ್ಶಿ ಪಳೆಯತಂಡ ಹರಿ, ಕಾಮಾಡು ಗ್ರಾಪಂ ಅಧ್ಯಕ್ಷ ಕಾವಡಿಚಂಡ ನಾಚಪ್ಪ, ಪ್ರಮುಖರಾದ ಮಾಚಿಮಂಡ ಅಯ್ಯಪ್ಪ, ಐನಂಡ ಕಾರ್ಯಪ್ಪ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net