ಕಳಪೆ ಕಾಮಗಾರಿ ನಡೆಸಿದರೆ ಸಹಿಸಲ್ಲ

Ballur J morarji school
Published on

ಔರಾದ್: ನಾಗೂರ (ಬಿ) ಗ್ರಾಮದಲ್ಲಿ ನಡೆಯುತ್ತಿರುವ ೨೨೦ ಕೆ.ವಿ.ವಿದ್ಯುತ್ ಉಪ ಕೇಂದ್ರದ ಸುತ್ತುಗೋಡೆಯಲ್ಲಿ ಬಿರುಕು, ಪಿಲ್ಲರ್‌ಗೆ ಕಳಪೆ ಕಬ್ಬಿಣದ ಸರಳು ಬಳಸಿದ್ದಕ್ಕೆ ಶಾಸಕ ಪ್ರಭು ಚವ್ಹಾಣ್ ಕಿಡಿ ಕಾರಿದರು.

ತಾಲೂಕಿನಲ್ಲಿ ಸೋಮವಾರ ವಿವಿಧೆಡೆ ಸಂಚರಿಸಿ ಕಾಮಗಾರಿ ಪರಿಶೀಲಿಸಿದ ಅವರು, ಕಾಮಗಾರಿ ಕಳಪೆ ಕುರಿತು ಪ್ರೊಜೆಕ್ಟ್ ಮ್ಯಾನೇಜರ್ ರೇಣುಕಾ, ಚೀಫ್ ಇಂಜಿನೀಯರ್ ಗಿರಿಧರ್ ಕುಲ್ಕರ್ಣಿ ಅವರಿಗೆ ಕರೆ ಮಾಡಿ, ಬೇಸರ ವ್ಯಕ್ತಪಡಿಸಿದರು.

ಅಧಿಕಾರಿಗಳು ಕಾಮಗಾರಿಯನ್ನು ಸರಿಯಾಗಿ ನಿರ್ವಹಿಸಬೇಕು, ಕಚೇರಿಗೆ ಸೀಮಿತವಾಗದೆ ಪ್ರತಿ ಹಂತದಲ್ಲಿ ಪರಿಶೀಲನೆ ನಡೆಸಬೇಕು. ಗುತ್ತಿಗೆದಾರರು ಎಚ್ಚರಿಕೆಯಿಂದ ಕೆಲಸ ಮಾಡಬೇಕು. ಅಧಿಕಾರಿಗಳು ಆರಂಭಿಕ ಹಂತದಲ್ಲೇ ದೋಷವನ್ನು ನಿವಾರಿಸಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಬಲ್ಲೂರ(ಜೆ) ಗ್ರಾಮದಲ್ಲಿ ಮುರಾರ್ಜಿ ದೇಸಾಯಿ ವಸತಿ ಶಾಲೆ ನಿರ್ಮಾಣ ಕಾಮಗಾರಿ ಪರಿಶೀಲಿಸಿ, ಕ್ಯೂರಿಂಗ್ ಸರಿಯಾಗಿ ಆಗುತ್ತಿಲ್ಲ ಎಂದು ಸಿಟ್ಟಾದರು. ಕಾಮಗಾರಿಗೆ ವೇಗ ನೀಡುವಂತೆ ಸೂಚನೆ ನೀಡಿದರು. ಬಡ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವುದಕ್ಕಾಗಿ ವಸತಿ ಶಾಲೆ ನಿರ್ಮಿಸಲಾಗುತ್ತಿದೆ. ಮಕ್ಕಳ ಭವಿಷ್ಯಕ್ಕೆ ಸಂಬಂಧಿಸಿದಂತೆ ಕಟ್ಟಡ ನಿರ್ಮಿಸಿ. ಲೋಪಗಳಾದರೆ ಸಹಿಸುವುದಿಲ್ಲ ಎಂದು ತಿಳಿಸಿದರು.

ಬಡ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡಲು ಅನುಕೂಲವಾಗುವಂತೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯನ್ನು ನಿರ್ಮಿಸಲಾಗುತ್ತಿದೆ. ಮಕ್ಕಳ ಭವಿಷ್ಯಕ್ಕೆ ಸಂಬಅಧಿಸಿದ ಶಾಲಾ ಕಟ್ಟಡ ಸರಿಯಾಗಿ ಆಗಬೇಕು. ಲೋಪಗಳು ಕಂಡುಬಅದರೆ ಸಹಿಸುವುದಿಲ್ಲವೆಂದು ತಿಳಿಸಿದರು. ರೇವಪಯ್ಯ ಮಂದಿರದ ಕಾಮಗಾರಿ ಪರಿಶೀಲಿಸಿದರು.

ಔರಾದ್ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿನ ನವೀಕರಣ ಕಾಮಗಾರಿಯನ್ನು ಶಾಸಕರು ವೀಕ್ಷಿಸಿದರು. ಗೋಡೆ ನವೀಕರಣ, ನೆಲಹಾಸು ಕಾಮಗಾರಿಯ ಗುಣಮಟ್ಟ ಪರಿಶೀಲಿಸಿದರು. ಉತ್ತಮ ಗುಣಮಟ್ಟದ ಉಪಕರಣಗಳನ್ನು ಬಳಸಬೇಕು. ಕಳಪೆಯಾದರೆ ಸಹಿಸುವುದಿಲ್ಲ ಎಂದರು. ಒಳಾಂಗಣ ಕ್ರೀಡಾಂಗಣಕ್ಕೆ ಭೇಟಿ ನೀಡಿ ಕಾಮಗಾರಿ ವೀಕ್ಷಿಸಿದರು.

ಎಪಿಎಂಸಿ ಅಧ್ಯಕ್ಷ ದೊಂಡಿಬಾ ನರೋಟೆ, ರಾಮಶೆಟ್ಟಿ ಪನ್ನಾಳೆ, ರಾಜಕುಮಾರ ಸೋರಳ್ಳಿ, ಬಾಲಾಜಿ ವಾಗ್ಮಾರೆ, ರಮೇಶ ಪಾಟೀಲ್ ಪಾಶಾಪುರ, ಸೀನೂ ಖೂಬಾ, ಎಂ.ಡಿ.ನಯೀಮ್, ಶಿವಕುಮಾರ ಪಾಂಚಾಳ, ಶಿವಾಜಿರಾವ ಕಾಳೆ, ಮಾದಪ್ಪ ಮಿಠಾರೆ, ಪ್ರಕಾಶ ಜೀರ್ಗೆ, ಬಾಲಾಜಿ ಠಾಕೂರ, ಸಂದೀಪ ಪಾಟೀಲ್, ಲೋಕೇಶ ಬಿರಾದಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net