ಕಳಪೆ ಕಾಮಗಾರಿ, ಅಧಿಕಾರಿಗಳಿಗೆ ನೋಟಿಸ್ ನೀಡಿ

ಚಿಂಚೋಳಿ ತಾಲೂಕಿನ ಹಳ್ಳಿಯೊಂದರ ಸರ್ಕಾರಿ ಶಾಲೆಯಲ್ಲಿ ಮಕ್ಕಳೊಂದಿಗೆ ಜಿಪಂ ಸಿಇಒ ಭಂವರ್‌ಸಿAಗ್ ಮೀನಾ ಮಧ್ಯಾಹ್ನದ ಬಿಸಿಯೂಟ ಸವಿದರು. ಶಂಕರ ರಾಠೋಡ್, ಯುವರಾಜ ಇತರರಿದ್ದರು.
ಚಿಂಚೋಳಿ ತಾಲೂಕಿನ ಹಳ್ಳಿಯೊಂದರ ಸರ್ಕಾರಿ ಶಾಲೆಯಲ್ಲಿ ಮಕ್ಕಳೊಂದಿಗೆ ಜಿಪಂ ಸಿಇಒ ಭಂವರ್‌ಸಿAಗ್ ಮೀನಾ ಮಧ್ಯಾಹ್ನದ ಬಿಸಿಯೂಟ ಸವಿದರು. ಶಂಕರ ರಾಠೋಡ್, ಯುವರಾಜ ಇತರರಿದ್ದರು.
Published on

ಚಿಂಚೋಳಿ: ಕೆಲ ಹಳ್ಳಿಗಳಲ್ಲಿ ಮಹತ್ವಾಕಾಂಕ್ಷಿ ಯೋಜನೆಯಾದ ಜಲಜೀವನ್ ಮಿಷನ್ ಕಾಮಗಾರಿ ಕಳಪೆಯಿಂದ ನಡೆದಿದ್ದು, ಸಂಬAಧಪಟ್ಟ ಅಧಿಕಾರಿಗಳಿಗೆ ನೋಟಿಸ್ ಕೊಡಿ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭಂವರ್‌ಸಿAಗ್ ಮೀನಾ ಅವರು ತಾಪಂ ಇಒಗೆ ಸೂಚನೆ ನೀಡಿದರು.

ಪಸ್ತಾಪೂರ ಹಾಗೂ ಗಡಿಕೇಶ್ವಾರ ಗ್ರಾಮಗಳಿಗೆ ಗುರುವಾರ ಭೇಟಿ ನೀಡಿ ಜಲಜೀವನ್ ಮಿಷನ್ ಕಾಮಗಾರಿ ಪರಿಶೀಲಿಸಿದ ಅವರು, ಕೋಟಿ- ಕೋಟಿ ರೂ. ಖರ್ಚಾದರು ಜನರಿಗೆ ನೀರು ಸಿಗುತ್ತಿಲ್ಲ. ಕೆಲಸ ಎಲ್ಲಿ ಮಾಡಿದ್ದೀರಿ ? ಸಂಪೂರ್ಣ ಕಳಪೆ ಕಾಮಗಾರಿಗೆ ಆಗಿದೆ. ಜನರಿಗೆ ಶುದ್ಧ ಕುಡಿಯುವ ನೀರು ಕೊಡಲು ಆಗದಿದ್ದರೆ ಮತ್ತೇನು ಮಾಡುತ್ತೀರಿ ಎಂದು ಕುಡಿಯುವ ನೀರಿನ ಸರಬರಾಜು ಅಧಿಕಾರಿ ಯುವರಾಜï ಅವರನ್ನು ತರಾಟೆಗೆ ತೆಗೆದುಕೊಂಡರು.

ಬಳಿಕ ಕೋಡ್ಲಿ ತಾಂಡಾ, ಪಸ್ತಾಪುರ, ಹೊಸಳ್ಳಿ, ತೇಗಲತಿಪ್ಪಿ, ಗಡಿಕೇಶ್ವಾರ, ಬೆನಕನಳ್ಳಿ, ಕೇರಳ್ಳಿ, ಪೆಂಚನಪಳ್ಳಿ ಗ್ರಾಮಗಳಲ್ಲಿ ಸಂಚಾರ ನಡೆಸಿ ಅಂಗನವಾಡಿ ಕೇಂದ್ರ, ಸರ್ಕಾರಿ ಶಾಲೆಗಳನ್ನು ವೀಕ್ಷಿಸಿದರು. ಅಲ್ಲದೆ ಮಕ್ಕಳೊಂದಿಗೆ ಮಧ್ಯಾಹ್ನದ ಬಿಸಿಯೂಟ ಸವಿದರು.

ತಾಪಂ ಇಒ ಶಂಕರ ರಾಠೋಡ್, ಗ್ರಾಪಂ ಅಧ್ಯP್ಷÀ ಅಶೋಕರೆಡ್ಡಿ, ಕುಡಿಯುವ ನೀರು ಸರಬರಾಜು ಅಧಿಕಾರಿ ಯುವರಾಜ, ಪ್ರಮುಖರಾದ ರಹಿಮತ್‌ಉಲ್ಲಾ ಹುಸೇನಿ, ನಾಗೇಂದ್ರಪ್ಪ ಬೆಡಕಪಳ್ಳಿ, ಶೇಖ್‌ಫರೀದ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net