

ಬಳ್ಳಾರಿ : ಊಟದಲ್ಲಿ ಹುಳ ಹಾಗೂ ಕಳಪೆ ಆಹಾರ ನೀಡುತ್ತಿದ್ದಾರೆ ಎಂದು ಆರೋಪಿಸಿ ಇಲ್ಲಿನ ವಿಎಸ್‌ಕೆ ವಿವಿಯ ಎಸ್‌ಸಿ, ಎಸ್‌ಟಿ ವಸತಿ ನಿಲಯಗಳ ವಿದ್ಯಾರ್ಥಿಗಳು ಕುಲಸಚಿವರ ಕಚೇರಿ ಮುಂಭಾಗದಲ್ಲಿ ಕೆಲ ಕಾಲ ದಿಢೀರ್ ಪ್ರತಿಭಟನೆ ನಡೆಸಿದರು.
ಶುಕ್ರವಾರ ವಸತಿ ನಿಲಯದಲ್ಲಿ ಮೆನು ಚಾರ್ಟ್‌ದಂತೆ ವಗ್ಗರಣೆ ಮಿರ್ಚಿ ನೀಡಿದ್ದರು. ಅದರಲ್ಲಿ ಹುಳು, ಕೂದಲು ಸೇರಿದಂತೆ ವಿವಿಧ ಕೀಟಗಳು ಆಹಾರದಲ್ಲಿವೆ ಎಂದು ಆರೋಪಿಸಿದರು. ಅಲ್ಲದೆ ಹಲವು ಬಾರಿ ವಾರ್ಡನ್ ಬಳಿ ಗಮನಕ್ಕೆ ತಂದರು ಯಾವುದೇ ಪ್ರಯೋಜನವಾಗಿಲ್ಲ ಎಂದು ವಿದ್ಯಾರ್ಥಿಗಳು ಅಧಿಕಾರಿಗಳ ವಿರುದ್ಧ ಅಸಮಾಧಾನ ಹೊರಹಾಕಿದರು.
ಕೂಡಲೇ ಪ್ರತಿಭಟನೆ ಸ್ಥಳಕ್ಕೆ ಕುಲಸಚಿವ ಎಸ್. ಎನ್. ರುದ್ರೇಶ್ ಭೇಟಿ ನೀಡಿ, ಪ್ರತಿಭಟನ ನಿರತ ವಿದ್ಯಾರ್ಥಿಗಳೊಂದಿಗೆ ಚರ್ಚಿಸಿ, ಇನ್ನೋಮ್ಮೆ ಹೀಗೆ ಆಗದಂತೆ ಕ್ರಮವಹಿಸಿ ಎಂದು ಭರವಸೆ ನೀಡಿದ ಬಳಿಕ ಪ್ರತಿಭಟನೆ ಕೈ ಬಿಡಲಾಯಿತು.