ಕಲ್ಲುಮಠ ಶಾಲೆ ಪ್ರಾರಂಭೋತ್ಸವ

2ss1swamuiji swagata
Published on

ಶನಿವಾರಸಂತೆ: ಸಮಿಪದ ಕೊಡ್ಲಿಪೇಟೆ ಕಲ್ಲುಮಠದ ಎಸ್.ಕೆ.ಎಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ 2023-24ನೇ ಶೈಕ್ಷಣಿಕ ಸಾಲಿನ ಪ್ರಾರಂಭೋತ್ಸವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳನ್ನು ಅದ್ದೂರಿಯಾಗಿ ಸ್ವಾಗತಿಸಿದರು.


ಪ್ರಾರಂಭೋತ್ಸವದ ಅಂಗವಾಗಿ ಶಾಲಾ ಆವರಣ, ಪ್ರವೇಶ ದ್ವಾರವನ್ನು ತಳೀರು-ತೋರಣ, ಹೂವುಗಳಿಂದ ಅಲಂಕರಿಸಲಾಗಿತ್ತು. ತರಗತಿಗೆ ಹಾಜರಾದ ವಿದ್ಯಾರ್ಥಿಗಳಿಗೆ ವಿದ್ಯಾಸಂಸ್ಥೆ ಅಧ್ಯಕ್ಷರು ಮತ್ತು ಕಲ್ಲುಮಠದ ಮಠಾಧೀಶ ಶ್ರೀ ಮಹಂತ ಸ್ವಾಮೀಜಿ ಹೂವು ನೀಡಿ ಬರಮಾಡಿಕೊಳ್ಳುವ ಮೂಲಕ ಶಾಲಾ ಪ್ರಾರಂಭೋತ್ಸವಕ್ಕೆ ಚಾಲನೆ ನೀಡಿದರು.


ಬಳಿಕ ಶ್ರೀಗಳು, ವಿದ್ಯಾರ್ಥಿಗಳಿಗೆ ಶಿಶ್ತು ಬದ್ದ ಕಲಿಕೆ, ಗುಣಾತ್ಮಕ ಶಿಕ್ಷಣ, ವಿದ್ಯಾರ್ಥಿಗಳು ಅಳವಡಿಸಿಕೊಳ್ಳಬೇಕಾದ ಮೌಲ್ಯ ಹಾಗೂ ಇನ್ನಿತರ ವಿಷಯಗಳ ಕುರಿತು ಹಿತವಚನ ಬೋಧಿಸಿದರು. ಅಲ್ಲದೆ ವಿದ್ಯಾರ್ಥಿಗಳ ಆರೋಗ್ಯ ಮತ್ತು ಕ್ರಿಯಾಶೀಲತೆಗೆ ಪೂರಕವಾದ ಕರ್ಜೂರ, ಬಾದಾಮಿ, ಹುತ್ತುತ್ತೆ, ಒಣದ್ರಾಕ್ಷಿ, ಗೋಡಂಬಿ ವಿತರಿಸಿ ಆಶೀರ್ವದಿಸಿದರು.


ಶಾಲೆಯ ಆಡಳಿತಾಧಿಕಾರಿ ಬಿ.ಎಸ್.ಪ್ರದೀಪ್, ಶಾಲಾ ಮುಖ್ಯಶಿಕ್ಷಕ ಎಚ್.ಎಂ.ಅಭಿಲಾಷ, ಶಾಲೆಯ ಶಿಕ್ಷಕರು, ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net