ಕಲ್ಲು ತೂರಿದ ದುಷ್ಕರ್ಮಿಗಳನ್ನು ಬಂಸಿ

02-08-Shiva-1
ಹರಿಯಾಣದಲ್ಲಿ ಬ್ರಿಜ್‌ಮಂಡಲ್ ಯಾತ್ರೆ ಮೇಲೆ ಕಲ್ಲು ತೂರಾಟ ನಡೆಸಿದ ದುಷ್ಕರ್ಮಿಗಳನ್ನು ಬಂಸುವಂತೆ ಒತ್ತಾಯಿಸಿ ರಾಯಚೂರಿನ ಜಿಲ್ಲಾಕಾರಿ ಕಚೇರಿ ಕೇಂದ್ರ ಸ್ಥಾನಿಕ ಅಕಾರಿ ಸುಗೂರೇಶ ದೇಸಾಯಿಗೆ ಭಜರಂಗ ದಳದಿಂದ ಬುಧವಾರ ಮನವಿ ಸಲ್ಲಿಸಲಾಯಿತು. ಸಂಘಟನೆ ನಗರ ಸಂಚಾಲಕ ಶರಣಬಸವ, ಪದಾಕಾರಿಗಳಾದ ಮಹೇಶ, ಶ್ರೀಕಾಂತ, ವಿಶಾಲ್, ಅಮಿತ್, ರಘುನಾಥರೆಡ್ಡಿ ಇದ್ದರು.
Published on

ರಾಯಚೂರು: ಹರಿಯಾಣದ ಮೇವಾತದಲ್ಲಿ ವಿಶ್ವ ಹಿಂದೂ ಪರಿಷತ್‌ನಿಂದ ಹಮ್ಮಿಕೊಂಡಿದ್ದ ಬ್ರಿಜ್‌ಮಂಡಲ್ ಜಲಾಭಿಷೇಕ ಯಾತ್ರಯ ಮೇಲೆ ಕಲ್ಲು ತೂರಾಟ ನಡೆಸಿದ ದುಷ್ಕರ್ಮಿಗಳನ್ನು ಬಂದಿಸುವಂತೆ ಬಜರಂಗದಳ ಒತ್ತಾಯಿಸಿದೆ.
ಸಂಘಟನೆ ನಿಯೋಗ ಈ ಕುರಿತು ಜಿಲ್ಲಾಕಾರಿ ಕಚೇರಿ ಕೇಂದ್ರ ಸ್ಥಾನಿಕ ಅಕಾರಿ ಸುಗೂರೇಶ ದೇಸಾಯಿಗೆ ಬುಧವಾರ ಮನವಿ ಸಲ್ಲಿಸಿ, ಯಾತ್ರೆಯ ಮೇಲೆ ಕಲ್ಲು ತೂರಾಟ ನಡೆಸಿ, ವಾಹನಗಳಿಗೆ ಬೆಂಕಿ ಹಚ್ಚಿರುವುದು ಪೂರ್ವನಿಯೋಜಿತ ಕೃತ್ಯವಾಗಿದೆ ಎಂದು ದೂರಿದರು.
ಹಿಂದೂ ಧಾರ್ಮಿಕ ಆಚರಣೆಗಳನ್ನು ನಿಲ್ಲಿಸುವ ಉದ್ದೇಶದಿಂದ ಈ ಕೃತ್ಯ ನಡೆಸಲಾಗಿದ್ದು, ಘಟನೆಯಲ್ಲಿ ಅನೇಕ ಸಾವು, ನೋವುಗಳು ಸಂಭವಿಸಿದ್ದು, ಕೂಡಲೇ ದುಷ್ಕರ್ಮಿಗಳನ್ನು ಬಂಸಿ ಕಠಿಣ ಶಿಕ್ಷೆಗೆ ಒಳಪಡಿಸಬೇಕು. ಮೃತಪಟ್ಟವರ ಕುಟುಂಬಕ್ಕೆ ಹಾಗೂ ಗಾಯಗೊಂಡವರಿಗೆ ಪರಿಹಾರ ಒದಗಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ನಿಯೋಗದಲ್ಲಿ ಸಂಘಟನೆ ನಗರ ಸಂಚಾಲಕ ಶರಣಬಸವ, ಪದಾಕಾರಿಗಳಾದ ಮಹೇಶ, ಶ್ರೀಕಾಂತ, ವಿಶಾಲ್, ಅಮಿತ್, ರಘುನಾಥರೆಡ್ಡಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net