ಕಲ್ಲು ಗಣಿಗಾರಿಕೆ ಅನುಮತಿ ರದ್ದುಪಡಿಸಿ : ಗ್ರಾಮಸ್ಥರಿಂದ ಪ್ರತಿಭಟನೆ, ಮುಜರಾಯಿ ತಹಸೀಲ್ದಾರ್​ ನಾಗವೇಣಿ ಮೂಲಕ ಡಿಸಿಗೆ ಮನವಿ

1
Published on

ಮುಳಬಾಗಿಲು: ತಾಲೂಕಿನ ಆವನಿ ಹೋಬಳಿ ಊರುಕುಂಟೆ ಮಿಟ್ಟೂರು ಗ್ರಾಪಂ ವ್ಯಾಪ್ತಿಯ ಬಂಡಹಳ್ಳಿಯಲ್ಲಿ ಬೆಂಗಳೂರು&ಚೆನ್ನೆ$ ಕಾರಿಡಾರ್​ ರಸ್ತೆ ನಿಮಾರ್ಣದ ಕಾಮಗಾರಿಗೆ ಜಲ್ಲಿಕಲ್ಲು, ಎಂ.ಸ್ಯಾಂಡ್​ ಗಣಿಗಾರಿಕೆಗೆ ಸರ್ಕಾರ ಅನುಮತಿ ನೀಡಿರುವುದನ್ನು ತಕ್ಷಣ ಹಿಂಪಡೆಯಬೇಕು ಎಂದು ಗ್ರಾಮಸ್ಥರು ಪ್ರತಿಭಟಿಸಿ ಗ್ರಾಮಕ್ಕೆ ಗುರುವಾರ ಗಣಿಗಾರಿಕೆಗೆ ಬಂದಿದ್ದ ವಾಹನಗಳನ್ನು ವಾಪಸ್​ ಕಳುಹಿಸಿದ ಟನೆ ನಡೆಯಿತು.

ಸಿಪಿಐ ಜಿ.ಲಕ್ಷಿ$್ಮಕಾಂತಯ್ಯ, ಗ್ರಾಮಾಂತರ ಪಿಎಸ್​ಐ ಪ್ರದಿಪ್​ಸಿಂಗ್​ ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರನ್ನು ಮನವೋಲಿಸಿ ಸರ್ಕಾರ ಮತ್ತು ಜಿಲ್ಲಾಡಳಿತ ನೀಡಿರುವ ಪರವಾನಗಿಯಂತೆ ಗಣಿಗಾರಿಕೆ ನಡೆಸಲು ಅವಕಾಶವಿದ್ದು ಇದನ್ನು ರದ್ದುಪಡಿಸಿದರೆ ಮಾತ್ರ ತಡೆಯಲು ಸಾಧ್ಯವಾಗುತ್ತದೆ. ಕಾನೂನನ್ನು ಪ್ರತಿಯೊಬ್ಬರೂ ಪಾಲಿಸಬೇಕು ಎಂದು ಎಚ್ಚರಿಕೆ ನೀಡಿ, ಒಂದು ದಿನದ ಮಟ್ಟಿಗೆ ದೂರು ಸಲ್ಲಿಸಲು ಗ್ರಾಮಸ್ಥರಿಗೆ ಅವಕಾಶ ಕಲ್ಪಿಸಿದರು.

ಆತಂಕಕ್ಕೆ ಒಳಗಾದ ಗ್ರಾಮಸ್ಥರು ಕೋಲಾರದ ಡಿಸಿ ಕಚೇರಿ ಮುಂದೆ ಪ್ರತಿಭಟಿಸಿ, ಮುಜರಾಯಿ ತಹಸೀಲ್ದಾರ್​ ಬಿ.ಎನ್​.ನಾಗವೇಣಿ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಬಂಡಹಳ್ಳಿಯ ಸರ್ವೇ ನಂಬರ್​ 57ರಲ್ಲಿನ 150 ಕ್ಕೂ ಹೆಚ್ಚು ಎಕರೆ ಪ್ರದೇಶದಲ್ಲಿ ಬಂಡೆಯಿದ್ದು ಇದರಲ್ಲಿ 11 ಎಕರೆ 20 ಗುಂಟೆ ವಿಸ್ತೀರ್ಣದಲ್ಲಿ ಕೆಸಿಸಿ ಬ್ಯುಲ್ಡ್​ ಕಾನ್​ ಸಂಸ್ಥೆಗೆ ಭೂ ವಿಜ್ಞಾನ ಇಲಾಖೆ ಮತ್ತು ಜಿಲ್ಲಾಡಳಿತ ಕಲ್ಲು ಗಣಿಗಾರಿಕೆಗೆ ಪರವಾನಗಿ ನೀಡಿದ್ದು, ಇದು ಕಾನೂನು ಉಲ್ಲಂಘನೆಯಾಗಿದೆ. ಕಲ್ಲುಗಣಿಗಾರಿಕೆ ನಡೆಯುವ ಸ್ಥಳ ಗ್ರಾಮಕ್ಕೆ ಸಮೀಪದಲ್ಲಿದ್ದು, ಗಣಿಗಾರಿಕೆ ನಡೆಸಲು ಅನುಮತಿ ನೀಡಿರುವುದರಿಂದ ಜನರು ನಿತ್ಯ ತೊಂದರೆ ಅನುಭವಿಸುತ್ತಿದ್ದಾರೆ.

ಗ್ರಾಮದ ಹಲವು ಕಲ್ಲುಕುಟಿಕರು ಬಂಡೆ ಕೆಲಸದಿಂದ ಜೀವನ ಸಾಗಿಸುತ್ತಿದ್ದಾರೆ. ಈಗ ಹೆದ್ದಾರಿ ನಿಮಾರ್ಣದ ಗಣಿಗಾರಿಕೆಗೆ ಅವಕಾಶ ಮಾಡಿಕೊಟ್ಟಿರುವುದರಿಂದ ಬಂಡೆ ಸಂಪೂರ್ಣ ಖಾಲಿಯಾಗುವುದರಿಂದ ಕೆರೆಗೆ ನೀರು ಬರುವುದು ನಿಲ್ಲುತ್ತದೆ. ಪರಿಸರದ ಮೇಲೆ ದುಷ್ಪರಿಣಾಮ ಬೀರುತ್ತದೆ. ಗಣಿಗಾರಿಕೆ ಸ್ಫೋಟದಿಂದಾಗಿ ಮನೆಗಳಿಗೆ ಹಾನಿಯುಂಟಾಗುತ್ತದೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದರು.

ಗ್ರಾಪಂ ಸದಸ್ಯ ಶ್ರೀರಾಮಪ್ಪ, ಗ್ರಾಮಸ್ಥರಾದ ಸಂಪತ್​, ಮುನೇಗೌಡ, ನಟರಾಜ್​, ವೆಂಕಟಸ್ವಾಮಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net