

ಹಾಸನ: ಕಲ್ಲು ಗಣಿಗಾರಿಕೆಯಿಂದ ಆನೆಗಳ ದಾಳಿ, ಮತ್ತು ಕೃಷಿ ವಟುವಟಿಕೆ ಮೇಲೆ ದುಷ್ಪಾರಿಣಾಮ, ಪರಿಸರ ಮಾಲಿನ್ಯ ಸೇರಿದಂತೆ ಅನೇಕ ಸಮಸ್ಯೆಗಳು ಉದ್ಭವಿಸಲಿವೆ. ಈ ಹಿನ್ನೆಲೆಯಲ್ಲಿ ಯಾವುದೇ ಕಾರಣಕ್ಕೂ ಕಲ್ಲು ಗಣಿಕಾರಿಕೆಗೆ ಅನುಮತಿ ನೀಡಬಾರದು ಎಂದು ಹೇಮಾವತಿ ಸೇನೆಯ ಜಿಲ್ಲಾಧ್ಯಕ್ಷ ರವಿ ಚಂಗಪ್ಪ ಆಗ್ರಹಿಸಿದರು.
ಸಕಲೇಶಪುರ ತಾಲೂಕಿನ ಯಸಳೂರು ಹೋಬಳಿಯ ಹೊಸೂರು ಗ್ರಾ.ಪಂ ವ್ಯಾಪ್ತಿಯ ಹೊಸಕೋಟೆ ಗ್ರಾಮದ ಪಶ್ಚಿಮ ದಿಕ್ಕಿನಲ್ಲಿರುವ ಕಲ್ಲು ಮಂಟಿಯಲ್ಲಿ ಈ ಹಿಂದೆ ಗಣಿಗಾರಿಕೆ ಚಟುವಟಿಕೆ ನಡೆಸುತ್ತಿದ್ದರು. ಈ ಹಿಂದೆ ಗ್ರಾಮಸ್ಥರು ಸಂಬಂಧಿಸಿದ ಇಲಾಖೆಗೆ ಮನವಿ ನೀಡಿದ್ದರಿದ್ದ ಗಣಿಗಾರಿಕೆಯನ್ನು ಸಂಪೂರ್ಣ ಸ್ಥಗಿತಗೊಳಿಸಲಾಗಿತ್ತು. ಆದರೆ ಮತ್ತೆ ಗ್ರಾಮದ ಎಸ್ಟೇಟ್‌ನಲ್ಲಿ ಗಣಿಗಾರಿಕೆ ಅನುಮತಿ ಪಡೆದಿದ್ದೇವೆ ಎಂದು ಹೇಳಿ,ಕಲ್ಲು ಗಣಿಗಾರಿಕೆ ನಡೆಸಲು ಸಿದ್ಧತೆ ನಡೆಸಲಾಗುತ್ತಿದೆ. ಇಲಾಖೆ ಯಾವುದೇ ಕಾರಣಕ್ಕೂ ಅನುಮತಿ ನೀಡಬಾರದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
ಗಣಿಗಾರಿಕೆಗೆ ಸ್ಪೋಟಕಗಳನ್ನು ಬಳಸುವುದರಿಂದ ನೀರಿನ ಅಂತರ್‌ಜಲ ಮಟ್ಟ ಕುಸಿಯುತ್ತದೆ, ಅಮೂಲ್ಯ ಗಿಡ ಮೂಲಿಕೆಗಳು, ಪ್ರಾಣಿ ಪಕ್ಷಿಗಳು, ಸಸ್ತನಿಗಳು, ಕೀಟಗಳು ಅವನತಿ ಹೊಂದುತ್ತಿವೆ. ಈಗಾಗಲೇ ಕಾಡಾನೆ ಸೇರಿದಂತೆ ವನ್ಯ ಜೀವುಗಳು ಆಹಾರವಿಲ್ಲದೆ ರೈತರು ಬೆಳೆದ ಗೆಡ್ಡೆಗೆಡಣಸು, ಭತ್ತ ತರಕಾರಿ ನಾಶಮಾಡುತ್ತದೆ ಇದರಿಂದಾಗಿ ರೈತರ ತೋಟಗದ್ದೆಗಳಿಗೆ ತೆರಲಿ ಕೆಲಸಮಾಡಲು ಕಾರ್ಮಿಕರು ಭಯ ಪಡುತ್ತಿದ್ದಾರೆ ಎಂದು ಅಳಲು ತೋಡಿಕೊಂಡರು.
ಈ ಹಿಂದೆ ಜಿಲ್ಲಾಧಿಕಾರಿಗಳ ಕಛೇರಿ ಮುಂದೆ ಪ್ರತಿಭಟನೆ ನೆಡೆಸಿ ಮನವಿ ಪತ್ರ ಸಲ್ಲಿಸಲಾಗಿತ್ತು. ಜೆಸಿಬಿ ಮೂಲಕ ಮರಗಿಡಗಳನ್ನು ನಾಶಮಾಡಿ ಸಮತಟ್ಟು ಮಾಡುತ್ತಿದ್ದಾರೆ. ಈಗಾಗಲೇ ಬರಪರಿಸ್ಥಿತಿ ಉಂಟಾಗಿ ಬೆಳೆ ನಾಶವಾಗಿದೆ. ಆದ್ದರಿಂದ ಗಣಿಗಾರಿಕೆ ನಡೆಯದಂತೆ, ಬೆಟ್ಟಗುಡ್ಡಗಳು ಮರಗಿಡಗಳು ನಾಶವಾಗದಂತೆ ಕೂಡಲೇ ಕ್ರಮ ತೆದುಕೊಳ್ಳಬೇಕು. ನದಿ ಮೂಲಗಳ ಉಗಮಸ್ಥಾನ, ಪ್ರಾಣಿಪಕ್ಷಿಗಳು, ಕೀಟಗಳು, ಸಸ್ತಾನಿಗಳು, ರೈತರು ಇನ್ನಿತರ ಜೀವನಾಡಿಗಳನ್ನು ರಕ್ಷಿಸಬೇಕೆಂದು ಇದರಿಂದ ಹಾಸನ ಹಾಗೂ ಕೊಡಗು ಜಿಲ್ಲೆಗೆ ಆಗುವ ತೊಂದರೆ ತಪ್ಪಿಸಬೇಕು. ಇಲ್ಲದಿದಲ್ಲಿ ಸಾವಿರಾರು ಜನ ಸೇರಿ ಬೃಹತ್ ಪ್ರತಿಭಟನೆ ನಡೆಸಲಗುವುದು ಎಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಎಚ್.ಕೆ ರಮೇಶ್, ಶಶಿ, ಪುಟ್ಟಸ್ವಾಮಿ ಗೌಡ, ಹರೀಶ್ ಹಾಜರಿದ್ದರು.