ಕಲ್ಲು ಎತ್ತಿ ಹಾಕಿ ಕೊಲೆ

CT-D--0001
Published on

ಚಿತ್ರದುರ್ಗ:ಮನೆ ಮುಂದೆ ಮಲಗಿದ್ದ ವ್ಯಕ್ತಿಯನ್ನು ಹತ್ಯೆ ಮಾಡಿರುವ ಘಟನೆ ಹೊಳಲ್ಕೆರೆ ತಾಲೂಕು ಕಂಬದೇವರಹಟ್ಟಿ ಗ್ರಾಮದಲ್ಲಿ ಮಂಗಳವಾರ ರಾತ್ರಿ ನಡೆದಿದೆ. ಕೊಲೆಯಾದವನನ್ನು ಕೃಷ್ಣಪ್ಪ(48)ಎಂದು ಗುರುತಿಸಲಾಗಿದೆ. ಮನೆ ಮಲಗಿದ್ದ ಕೃಷ್ಣಪ್ಪನ ತಲೆ ಮೇಲೆ ದು ಷ್ಕರ್ಮಿಗಳು ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದಾರೆ. ಹೊಳಲ್ಕೆರೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೊಲೆ ಕುರಿತಂತೆ ನಾನಾ ಶಂಕೆಗಳು ಎದುರಾಗಿದ್ದು,ನಿಖರ ಕಾರಣವನ್ನು ಪೊಲೀಸರ ತನಿಖೆಯಿಂದ ಹೊರಬೀಳ ಬೇಕಿದೆ, ಪೊಲೀಸರು ದುಷ್ಕರ್ಮಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net