

ಘಟಪ್ರಭಾ: ಪಟ್ಟಣದ ಖಾಸಗಿ ಆಸ್ಪತ್ರೆಯಲ್ಲಿ ಅನಾರೋಗ್ಯದ ಹಿನ್ನೆಲೆಯಲ್ಲಿ ದಾಖಲಾಗಿದ್ದ ರೋಗಿಯೋರ್ವ ತನ್ನ ಜತೆಗೆ ಇದ್ದ ವ್ಯಕ್ತಿಯನ್ನು ಕಲ್ಲಿನಿಂದ ಹೊಡೆದು ಕೊಲೆ ಮಾಡಿದ ಘಟನೆ ಭಾನುವಾರ ತಡರಾತ್ರಿ ನಡೆದಿದ್ದು, ಈ ಸಂಬಂಧ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಮಹಾರಾಷ್ಟ್ರದ ಬೀಡ ಜಿಲ್ಲೆಯ ಪರಲಿ ತಾಲೂಕಿನ ಅಶ್ವಲಂಬಾ ಗ್ರಾಮದ ವಿಲಾಸ ಜೋಗದಂಡ (28) ಕೊಲೆಯಾದವ. ಅದೇ ಗ್ರಾಮದ ಶ್ರೀಕೃಷ್ಣ ಡಾಕನೆ ಕೊಲೆ ಮಾಡಿದವ. ವಿಲಾಸಗೆ ಅನಾರೋಗ್ಯವಿದ್ದ ಕಾರಣ ಈತ ಪಟ್ಟಣದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ. ಈತನ ಜತೆಗೆ ಶ್ರೀಕೃಷ್ಣ ಇದ್ದನು. ಭಾನುವಾರ ವಿಲಾಸ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾನೆ.
ಈ ವೇಳೆ ಇಬ್ಬರು ಆಸ್ಪತ್ರೆಯ ಆವರಣದಲ್ಲಿ ಮಲಗಿದ್ದಾರೆ. ಏಕಾಏಕಿ ಇಬ್ಬರ ನಡುವೆ ಜಗಳ ಆರಂಭಗೊಂಡು ವಿಲಾಸ ಶ್ರೀಕೃಷ್ಣನನ್ನು ಕಲ್ಲಿನಿಂದ ಹೊಡೆದು ಕೊಲೆ ಮಾಡಿದ್ದಾನೆ. ಕೊಲೆಗೆ ಹಣಕಾಸಿನ ವ್ಯವಹಾರವೇ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ. ಘಟಪ್ರಭಾ ಪೊಲೀಸ್ ಠಾಣೆಯ ಪಿ.ಐ ಎಚ್.ಡಿ.ಮುಲ್ಲಾ, ಆರ್.ಎಸ್.ಕಣವಿ, ಸಿಬ್ಬಂದಿ ರಾಜು ಹೊಳ್ಕಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.