ಕಲ್ಲಿನಿಂದ ಜಜ್ಜಿ ಯುವಕನ ಬರ್ಬರ ಹತ್ಯೆ

Crime_20250709001802143.jpg
Published on

ಕಲ್ಲಿನಿಂದ ಜಜ್ಜಿ ಯುವಕನ ಬರ್ಬರ ಹತ್ಯೆ

ಸ‌ಂಕೇಶ್ವರ: ಕಲ್ಲಿನಿಂದ ಹಲ್ಲೆ ಮಾಡಿ ಯುವಕನೊರ್ವನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಹುಕ್ಕೇರಿ ತಾಲೂಕಿನ ಕಣಗಲಾ ಸರ್ಕಾರಿ ಆಸ್ಪತ್ರೆ ಬಳಿ ಭಾನುವಾರ ನಡೆದಿದೆ.

ಕೊಲ್ಲಾಪುರ ಜಿಲ್ಲೆಯ ಕಾಪಸಿ ಪಟ್ಟಣದ ನಿವಾಸಿ ದೇವಾನಿ ಉರ್ಪ ಆನಂದ ಡುಕ್ರಿ (20) ಕೊಲೆಯಾದ ಯುವಕ. ಕಿಶನ ವಿಶಾಲ ಮಾಳಿ ಕೊಲೆ ಮಾಡಿರುವ ಆರೋಪಿ. ಕೊಲೆಯಾದ ಯುವಕ ಮತ್ತು ಆರೋಪಿ ಇಬ್ಬರು ಭಾನುವಾರ ಕಣಗಲಾ ಗ್ರಾಮಕ್ಕೆ ಬಂದಿದ್ದರು. ಈವೇಳೆ ಇಲ್ಲಿನ ಸರ್ಕಾರಿ ಆಸ್ಪತ್ರೆಯ ಹಿಂಬದಿಯ ಜಮೀನಿನಲ್ಲಿ ಇಬ್ಬರು ನಡುವೇ ಗಲಾಟೆಯಾಗಿ ಕಲ್ಲಿನಿಂದ ಮೃತ ಯುವಕನನ್ನು ಆರೋಪಿ ಹಲ್ಲೆ ಮಾಡಿ ಕೊಲೆಗೈದಿದ್ದಾನೆ. ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಈ ಕುರಿತು ಸಂಕೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net